ಬುಧವಾರ, ಅಕ್ಟೋಬರ್ 7, 2015

ಗೌರಿ ಲಂಕೇಶ್, ಪ್ರತಿಭಾ ನಂದಕುಮಾರ್ ಮತ್ತು ಇತ್ಯಾದಿ ...

ಯಾರಾದರು ಇವತ್ತಿನ (06.10.2015) ಚಂದನ ಚಾನೆಲ್ಲಿನ ಬೆಳಗು ಕಾರ್ಯಕ್ರಮ ನೋಡಿಲ್ಲ ಅಂದರೆ ಖಂಡಿತವಾಗಿ ಅವರು ನತದೃಷ್ಟರು ಅಂತಲೇ ಅರ್ಥ , ಅಂತಹದು ಏನಿತ್ತು ಅಂದ್ರೆ ಕರ್ನಾಟಕದ ಏಕೈಕ ಸೌಹಾರ್ದಗಿತ್ತಿ, ಗೌರಿ ಲಂಕೇಶ್ ರ ಸಂದರ್ಶನ , ನಡೆಸಿಕೊಟ್ಟವರು ಯಾರು ಅಂದ್ರೆ ಜಗತ್ತಿನ ಸಕಲ ವಿದ್ಯಮಾನಕ್ಕೂ , ತನ್ನ ಸ್ವಂತ ಅಭಿಪ್ರಾಯ ಹೊಂದಿರುವ, ಸಂದರ್ಶನ ನಡೆಸಲೆಂದೇ ಜನ್ಮ ತಳೆದಂತಿರುವ ಪ್ರತಿಭಾ ನಂದಕುಮಾರ್.
ಬಹುಶ ಇಂತಹಂದೊಂದು ಸೊಗಸಾದ ಸಂದರ್ಶನ ನಾನು ಮೊದಲು ನೋಡಿದ್ದೇ ಇಲ್ಲ , ಅಗಸನೊಬ್ಬ ತನ್ನ ಸ್ವಂತ ಕತ್ತೆಯನ್ನು ಕೆರೆ ಮಧ್ಯ ನಿಲ್ಲಿಸಿಕೊಂಡು , ನೀರಲ್ಲಿ ಅದ್ದಿ ಅದ್ದಿ ತೊಳೆಯುತ್ತಿದ್ದರೆ , ತನ್ನ ತೊಳೆಯುವ ಮಾಲಿಕನ ನೆಕ್ಕುಲು ಪ್ರಯತ್ನಿಸುವ ಕತ್ತೆ , ಇವರಿಬ್ಬರ ಈ ಜುಗಲಬಂದಿಯನ್ನ ದೂರದಿಂದ ನೀವು ನೋಡುತ್ತಿದ್ದರೆ ಆಗುವಂತದ್ದೆ ರೋಮಾಂಚನ , ಈ ಸಂದರ್ಶನ ನೋಡುವಾಗ ನನಗೆ ಆಗುತ್ತಿತ್ತು ಅಂದರೆ ಖಂಡಿತ ಇದು ಅತಿಶಯೋಕ್ತಿ ಅಲ್ಲ .
ಮಾತುಮಾತಿಗೂ ಗೌರಿ ಯವರನ್ನ ಸಾಮಾಜಿಕ ಕಾರ್ಯಕರ್ತೆ ಅನ್ನುವ ಪ್ರತಿಭಾಕ್ಕ, ನೀವು ಕೂಡ ಹೋರಾಟಗಾರರೆ ಅಂತ ಪ್ರತಿಭಾಕ್ಕನ್ನ ರಮಿಸುವ ಗೌರಿ, ಖಂಡಿತ ಹೇಳ್ತಿನಿ , ನೀವು ಈ ಕಾರ್ಯಕ್ರಮ ನೋಡಿಲ್ಲ ಅಂದ್ರೆ ನತದೃಷ್ಟರೆ ಸರಿ.
ಆದರೆ ಇಂತಹ ಒಂದು ಅದ್ಭುತ ಸಂದರ್ಶನದಲ್ಲಿ ಪ್ರತಿಭಾಕ್ಕ ಒಂದು ದೊಡ್ಡ ಸುಳ್ಳೊಂದನ್ನು ಗೌರಿ ಕಡೆ ಒಗಾಯಿಸಿದರು, ಅದೇನಂದರೆ “ ಲಂಕೇಶ್ ಕಾಲವಾದ ನಂತರವೂ ನೀವು ಹೇಗೆ ಲಂಕೇಶ್ ಪತ್ರಿಕೆನ ಅದರ ಉತ್ತರಾಧಿಕಾರಿಯಾಗಿ ಯಶಸ್ವಿಯಾಗಿ ಹೇಗೆ ನಡೆಸುತ್ತಿದ್ದಿರಿ ಅಂತ “ , ತಮ್ಮ ಕಡೆ ಬಂದ ಸುಳ್ಳನ್ನು ಮುಲಾಜಿಲ್ಲದೆ ತಲೆ ಮೇಲೆ ಇಟ್ಟುಕೊಂಡ ಗೌರಿ , ತಾನು ಕನ್ನಡ ಬರೆಯಲು ಪಟ್ಟ ಕಷ್ಟ , ಪತ್ರಿಕೆ ನಡೆಸಲು ಪಟ್ಟ ಕಷ್ಟ, ಅದು ಇದು ಅಂತೆಲ್ಲ ಅಂದು, ಪಿ. ಲಂಕೇಶ್ ತೀರಿಹೋದ ನಂತರ ಮುಚ್ಚಬೇಕಂದಿದ ಪತ್ರಿಕೆಯನ್ನ, ಪಿ. ಲಂಕೇಶ್ ತೀರಿಹೋದ ೧೫ ವರ್ಷದ ನಂತರವೂ ಯಶಸ್ವಿಯಾಗಿ ನಡೆಸುತ್ತಿದ್ದೇನೆ ಅಂತ ಬೆನ್ನು ತಟ್ಟಿಕೊಂಡರು.
ಆದರೆ ಸತ್ಯ ಏನಂದರೆ ಗೌರಿ ಲಂಕೇಶ್ ನಡೆಸುತ್ತಿರುವುದು ಪಿ ಲಂಕೇಶ್ ನಡೆಸಿದ್ದ ಒರಿಜಿನಲ್ “ಲಂಕೇಶ್ ಪತ್ರಿಕೆ” ಅಲ್ಲ , ಅದು ಲಂಕೇಶ್ ಪತ್ರಿಕೆಯ ತರಹವೇ ಕಾಣುವ ಡೂಪ್ಲಿಕೇಟ್ “ ಲಂಕೇಶ್ ಪತ್ರಿಕೆ “ ಅದರ ಹೆಸರು "ಗೌರಿ ಲಂಕೇಶ್ ಪತ್ರಿಕೆ " ಅಂತ . ಆದರೆ ಈ ವಿಷಯನ ಗೌರಿ ಸಾರಾಸಗಟಾಗಿ ಮುಚ್ಚಿಟ್ಟರು. ಮಾತೆತ್ತಿದ್ದರೆ ಸ್ತ್ರೀ ಸಬಲೀಕರಣ ಅನ್ನೋ ಗೌರಿ ಲಂಕೇಶ್ , ಅಪ್ಪನ ಹೆಸರಿಲ್ಲದೆ ಪತ್ರಿಕೆ ನಡೆಸಲಾರೆ ಅನ್ನೋದನ್ನ ಹೇಳೋಕ್ಕೆ ನಾಚಿಕೊಂಡರು ಅನ್ಸುತ್ತೆ . ಅದೇನೇ ಇರಲಿ ಗೌರಿ, “ಲಂಕೇಶ್ ಪತ್ರಿಕೆ “ ಯಾ ಉತ್ತರಾಧಿಕಾರಿ ಅಲ್ಲ ಅನ್ನೋದು ಗೊತ್ತಿದ್ದೂ ಪ್ರತಿಭಾಕ್ಕ ಸುಳ್ಳು ಪ್ರಶ್ನೆ ಕೇಳಿದ್ದು ಒಂದು ಕಡೆಯಾದರೆ , ಆತ್ಮ ಸಾಕ್ಷಿ ಇಲ್ಲದೆ ತಾನೇ ಪತ್ರಿಕೆಯ ಉತ್ತರಾಧಿಕಾರಿ ಅಂತ ಸುಳ್ಳೇ ಬಡಾಯಿ ಕೊಚ್ಚಿಕೊಂಡ ಗೌರಿ ಲಂಕೇಶ್ ಇನ್ನೊಂದೆಡೆ . ಮೇಲೆ ಹೇಳಿದ ಅಗಸ ಕತ್ತೆಯ ಹೋಲಿಕೆ ನಿಮಗೆ ಈಗ ಮನದಟ್ಟಾಗಿರಬಹುದು.
ಆದರೆ ಇದೆಲ್ಲಕ್ಕಿಂತ ಇಂಟರೆಸ್ಟಿಂಗ್ ಕಥೆ ಅಂದರೆ , ಪಿ ಲಂಕೇಶ್ ತೀರಿ ಹೋದ ಮೇಲೆ “ಲಂಕೇಶ್ ಪತ್ರಿಕೆ” ಗಾಗಿ ನಡೆದ ಜಗಳದ ಕಥೆ. ಲಂಕೇಶ್ ರು ತೀರಿ ಹೋದ ನಂತರ ಸಂಪಾದಕಿ ಸ್ಥಾನದಲ್ಲಿ ಬಂದು ಕೂತ ಗೌರಿ ಮಾಡಿದ ಮೊಟ್ಟ ಮೊದಲ ಕೆಲಸ ಅಂದರೆ , ಮಲೆನಾಡಿನ ಕಾಡಿನಲ್ಲಿ ಅಲೆಯುತ್ತಿದ್ದ ನಕ್ಸಲರ ಬಗ್ಗೆ ಯದ್ವಾ ತದ್ವಾ ಹೊಗಳಿ ಬರೆದಿದ್ದು, ಮಲೆನಾಡಿನ ಕಾಡಿನಲ್ಲಿ ಬಂದೂಕು ಇಟ್ಟುಕೊಂಡು ಹಂದಿ, ಕಾಡುಬೇಕ್ಕು ಬೇಟೆ ಆಡುತ್ತಿದ್ದ ನಕ್ಸಲರನ್ನ , ಈ ಸಮಾಜದ ಉದ್ದಾರಕ್ಕೆ ಮೇಲಿಂದ ಉದುರಿ ಬಿದ್ದವರೆಂದು ವಾಮಚಗೊಚರ ಹೊಗಳಿ ಬರೆಯುತ್ತಿದ್ದ ಗೌರಿ ಯವರಿಂದಾಗಿ ಅತಿ ಹೆಚ್ಚು ಮುಜುಗರಕ್ಕೆ ಬಿದ್ದವನೆಂದರೆ ಗೌರಿಯ ಸ್ವಂತ ತಮ್ಮ ಇಂದ್ರಜಿತ್ ಲಂಕೇಶ್ . ಅಲ್ಲಿಂದ ಶುರುವಾಗಿದ್ದು , “ಲಂಕೇಶ್ ಪತ್ರಿಕೆ”ಯಾ ಮಾಲಿಕತ್ವಕ್ಕೆ ನಡೆದ ಕೋಳಿ ಜಗಳದ ಕತೆ. ಗೌರಿ ಯನ್ನ ಲಂಕೇಶ್ ಪತ್ರಿಕೆಯಿಂದ ತೊಲಗಿಸಬೇಕೆಂದು ಇಂದ್ರಜಿತ್ ಪಣ ತೊಟ್ಟಗಿತ್ತು .
ಯಾವಾಗ “ಲಂಕೇಶ್ ಪತ್ರಿಕೆ”ಯ ಸಂಪಾದಕಿ ಸ್ಥಾನದಲ್ಲಿ ಮುಂದುವರೆಯುವುದು ಸಾದ್ಯವಿಲ್ಲ ಎಂದು ಅರಿವಾಯಿತೋ, ರಾತ್ರೋರಾತ್ರಿ , ಕಂಪ್ಯೂಟರ್ , ಲ್ಯಾಪ್ಟಾಪ್ , ಪ್ರಿಂಟರ್ ಸಮೇತ ಗೌರಿ ಮಾಯವಾದರು , ಬೆಳಿಗ್ಗೆ ಬಂದು ಖಾಲಿ ಆಫೀಸ್ ನೋಡಿದ ಇಂದ್ರಜೀತ್ , ಅಕ್ಷರಶಃ ಗೌರಿ ಲಂಕೇಶ್ ವಿರುದ್ದ “ಕಂಪ್ಯೂಟರ್ ಕಳ್ಳಿ” ಅಂತ ಪೋಲಿಸ್ ಕಂಪ್ಲೇಂಟ್ ಕೊಟ್ಟರು . ಯಾವಾಗ ತನ್ನ ಮೇಲೆ ಇಂದ್ರಜಿತ್ ಕಂಪ್ಲೇಂಟ್ ಕೊಟ್ಟಿದ್ದಾರೆ ಅಂತ ಗೌರಿಗೆ ವಿಷಯ ತಿಳಿಯಿತೋ , ತಕ್ಷಣ ಇಂದ್ರಜಿತ್ ತನಗೆ ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರೆ ಎಂದು ಸ್ವಂತ ತಮ್ಮನ ಮೇಲೆ ಕೊಲೆ ಯತ್ನ ಕೇಸ್ ಜಡಿಸಿದರು.
ನಂತರ ಕೇಸ್ ಕತೆ ಏನಾಯ್ತೋ ಗೊತ್ತಿಲ್ಲ , ಒಂದಿದ್ದ “ಲಂಕೇಶ್ ಪತ್ರಿಕೆ “ ಈಗ ಎರಡಾಗಿ, ಸಮಸ್ತ ಕರ್ನಾಟಕದ ಬೋಂಡ ಬಜ್ಜಿಗಳ ಎಣ್ಣೆ ಹೀರುತ್ತಿವೆ .
ಹಾಗಾದ್ರೆ ಇದೆಲ್ಲ ಸಂದರ್ಶನ ನಡೆಸಿದ್ದ ಪ್ರತಿಭಾಕ್ಕಗೆ ಗೊತ್ತಿರಲಿಲ್ಲವೇ, ಗೊತ್ತಿದ್ದೂ ಲಂಕೇಶ್ ಪತ್ರಿಕೆಯಾ ಉತ್ತರಾಧಿಕಾರಿ ಪಟ್ಟ ಗೌರಿಗೆ ಕಟ್ಟಿದರೆ ಅನ್ನೋದು ಪ್ರಶ್ನೆ , ಪ್ರತಿಭಾಕ್ಕೆ ಇದೆಲ್ಲ ಗೊತ್ತಿರಲಿಲ್ಲ ಅನ್ನೋಣವೆಂದರೆ , ಎಷ್ಟಾದರೂ ಪ್ರತಿಭಾಕ್ಕ ಹುಳಿಮರಕ್ಕೆ ಅಂಟಿ ಕೊಂಡೆ ಇದ್ದ ಬಳ್ಳಿ , ಹುಳಿ ಮರದ ಉದುರಿಬಿದ್ದ ಹುಣಸೆ ಹಣ್ಣಿನ ಕಥೆ ಗೊತ್ತಿರಲಿಲ್ಲ ಅಂದರೆ ನಂಬೋಕ್ಕೆ ಕಷ್ಟ .
ಅದೇನೇ ಇರಲಿ ಸ್ವಂತ ತಮ್ಮನನ್ನೇ ಬಿಡದ ಗೌರಿ ನಮ್ಮನ್ನ ಬಿಟ್ಟಾಳೆಯೇ ಅನ್ನೋ ಅಂಜಿಕೆಯಿಂದಲೇ ಇಲ್ಲಿಗೆ ಇದನ್ನ ಮುಗಿಸೋಣ ..
ಜೈ ಮಾಕಾಳಮ್ಮ...

ಮಂಗಳವಾರ, ನವೆಂಬರ್ 4, 2014

ಮತ್ತೆ ಹುಟ್ಟಿ ಬಾರದಿರು ನಂದಿತಾ , ನಿನ್ನ ಕಾಪಾಡುವ ಯೋಗ್ಯತೆ ನಮಗಿಲ್ಲ ..



ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ .... ನಿಜ ತೀರ್ಥಹಳ್ಳಿ ಬೆಚ್ಚಿ ಬಿದ್ದಿದೆ..
ಯಾವ ಊರನ್ನು , ಸುಸಂಸ್ಕೃತರ ನಾಡು ಅನ್ನುತ್ತಿದ್ದೆವು, ಯಾವ ಊರಿನ ಜನರನ್ನು ಸಭ್ಯರು , ಸಜ್ಜನರು ಅನ್ನುತ್ತಿದ್ದೆವು ,ಯಾವ ಊರಿನಲ್ಲಿ ನೀರು ಕೇಳಿದವರಿಗೆ ಬೆಲ್ಲ ಕೊಡುತ್ತಿದ್ದರೋ , ಅದೇ ಜನ ಇಂದು ರೊಚ್ಚಿಗೆದ್ದಿದ್ದಾರೆ , ತಮ್ಮದೇ ಊರಿನ ಎಳೆ ಹೆಣ್ಣು ಮಗಳನ್ನ , ಹಾಡಹಗಲೇ ಅಪಹರಿಸಿ , ಅತ್ಯಾಚಾರ ನಡೆಸಿ , ವಿಷ ಕುಡಿಸಿ ಕೊಲೆಗೈದ ಸಂಗತಿಯನ್ನ ಅರಗಿಸಿಕೊಳ್ಳಲಾಗದೆ ತೊಳಲಾಡುತ್ತಿದ್ದಾರೆ ... ತೀರ್ಥಹಳ್ಳಿ ಜನ ಬೀದಿಗೆ ಬಂದಿದ್ದಾರೆ , ಆ ನತದೃಷ್ಟ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಪ್ರತಿಕಾರ ಕೇಳುತ್ತಿದ್ದರೆ , ಸತ್ತವಳು ಯಾರ ಮಗಳಾದರೇನು , ತಮ್ಮದೇ ಮಗಳೇನು ಎಂಬಂತೆ ಕಂಬನಿ ಮಿಡಿದಿದ್ದಾರೆ ... ಇಡಿ ತಾಲೂಕ್ಕಿಗೆ ತಾಲೂಕು ಪ್ರತಿಭಟನೆಯಲ್ಲಿ ನಿರತವಾಗಿದ್ದರೆ , ಆದರೆ ಇಲ್ಲೊಬ್ಬ ಮನುಷ್ಯ ಏನು ಆಗಿಯೇ ಇಲ್ಲವಂತೆ ತಣ್ಣಗೆ ಹೇಳಿಕೆ ಕೊಡುತ್ತ ಓಡಾಡುತ್ತಿದ್ದಾರೆ, ಆ ಮನುಷ್ಯ ಬೇರೆ ಯಾರು ಅಲ್ಲ , ಈ ಘನವೆತ್ತ ಸರ್ಕಾರದ ಶಿಕ್ಷಣ ಮಂತ್ರಿ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ್ ...

ಕಿಮ್ಮನೆ ರತ್ನಾಕರ್ , ಹುಡುಗಿ ತೀರಿಕೊಂಡ ದಿನ ಕೊಟ್ಟ  ಹೇಳಿಕೆ ಹೇಗಿತ್ತು ಎಂದರೆ , ತೀರ್ಥಹಳ್ಳಿ ಜನತೆಗೂ , ನಂದಿತಾ ಸಾವಿಗೂ ಸಂಭಂದವೇ ಇಲ್ಲ , ಪ್ರತಿಭಟನೆ , ಗಲಾಟೆ ನಡೆಸುತ್ತಿರುವುದು ಬಿಜೆಪಿ ಜನರೇ ಹೊರತು, ಸಾಮಾನ್ಯ ನಾಗರಿಕರಲ್ಲ ಎಂದು .ಒಬ್ಬ ಜನಪ್ರತಿನಿಧಿ ಹಾಳಾಗಿ ಹೋಗಲಿ , ಒಬ್ಬ ಮನುಷ್ಯನಾಗಿ ಇಂತಹ ಮಾತು ಯಾರಾದ್ರೂ ಆಡಲು ಸಾಧ್ಯವೇ .. ಬಾಲಕಿಯ ಸಾವಿನಲ್ಲೂ ರಾಜಕೀಯ ಹುಡುಕುವ... ಸಾವಿಗೆ ನ್ಯಾಯ ಕೇಳುವ ಪ್ರತಿಭಟನೆಯಲ್ಲೂ ದುರುದ್ದೇಶ ಕಾಣುವ ಇಂತಹ ಮನುಷ್ಯ , ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅನ್ನುವುದು , ಇಡಿ ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ..  ತೀರ್ಥಹಳ್ಳಿ ಯಾ ಜನ ಒಬ್ಬ ಅಮಾಯಕ ಬಾಲಕಿಯ ಸಾವಿಗೆ ನ್ಯಾಯ ಕೇಳುವ ಹಾಗೆ ಇಲ್ಲವ ? ಹಾಗಾದ್ರೆ ತೀರ್ಥಹಳ್ಳಿಯ ಸಾಮಾನ್ಯ ನಾಗರಿಕ ಅಷ್ಟೊಂದು ಸಂವೇದನ ಹೀನನಾಗಿ ಬದಲಾದನೆ ? , ನಂದಿತಾ ಳ ಶವ ಮೆರವಣಿಗೆಯಲ್ಲಿ ಕಣ್ಣಿರು ಇಡುತ್ತಿದ್ದ ಹೆಣ್ಣು ಮಕ್ಕಳು ಗ್ಲಿಸರಿನ್ ಹಾಕಿ ಕೊಂಡು ಬಂದಿದ್ದರೆ? ಹೇಳಿ ಕಿಮ್ಮನೆ ಅವರೇ , ಇಂತಹ ಬರ್ಬರತೆ ಯನ್ನ ಖಂಡಿಸಲು ಒಂದು ಪಕ್ಷದ ಕಾರ್ಯಕರ್ತ ಆಗಿಯೇ ಇರಬೇಕೆ ? ಕಿಮ್ಮನೆ ಅವರಿಗೆ ಅತ್ಯಾಚಾರಿಗಳನ್ನ  ರಕ್ಷಿಸಲು ಇಂತಹ ಉತ್ಸಾಹ ಯಾಕೆ ? ನಂದಿತಾ ಳ ಕೊಲೆಯನ್ನ , ಅಸಹಜ ಸಾವು ಎಂದು ಬಿಂಬಿಸಲು ಕಾರಣ , ಅವರ ಹೃದಯ ಹೀನ ಲೆಕ್ಕಾಚಾರ . ಇಷ್ಟಕ್ಕೂ ಕಿಮ್ಮನೆ ಈ ಕೆಳಮಟ್ಟಕ್ಕೆ ಇಳಿಯಲು ಕಾರಣ , ತಮ್ಮ ಸಮಸ್ತ ಚುನಾವಣಾ ಖರ್ಚು ನೋಡಿಕೊಂಡ ನ್ಯಾಷನಲ್  ಬ್ರದರ್ಸ್ ನ ಋಣ ಸಂದಾಯ ಎಂದು  ಇಡಿ ತೀರ್ಥಹಳ್ಳಿ ಮಾತನಾಡುತ್ತಿದೆ .

ಅತ್ಯಂತ ಸಭ್ಯ ಊರು ಎಂದು ಕರೆಸಿಕೊಳ್ಳುವ ತೀರ್ಥಹಳ್ಳಿಯಲ್ಲಿ , ಹೆಣ್ಣು ಮಕ್ಕಳನ್ನು ದೇಶದ ನಾನಾ  ವೇಶ್ಯಾವಾಟಿಕೆಗೆ ಗೃಹಕ್ಕೆ  ಮಾರುವ ವ್ಯವಸ್ತಿತ ಜಾಲ ಇದೆ .. ಕಳ್ಳ ನೋಟು ಚಲಾವಣೆ ಮಾಡುವ ಜಾಲವಿದೆ , ಶ್ರೀಗಂದ ತೀರುವ ತನಕ ತಿಂದು ತೇಗಿದ ಕಳ್ಳರ ಗುಂಪು ಈಗ , ಮರಗಳ್ಳತನಕ್ಕೆ ಇಳಿದಿದ್ದಾರೆ , ಅಕ್ರಮ ಮರಳು ದಂಧೆ , ಅಕ್ರಮ ಕಲ್ಲು ಗಣಿಗಾರಿಕೆ  ಇದೆ, ಇಷ್ಟೆಲ್ಲಾ ಇದ್ದರು , ಇಲ್ಲಿನ ಪೋಲಿಸ್ ರು ಸುಖ ಜೀವಿಗಳು.. ಯಾವ ಅಕ್ರಮಕ್ಕು ಬ್ರೇಕ್ ಹಾಕಿದ ಉದಾಹರಣೆ ಇಲ್ಲ.. ಆದರೆ ನಂದಿತಾ ಕೊಲೆ , ಪ್ರಕರಣವನ್ನ ಆತ್ಮಹತ್ಯೆ ಎಂದು ನಿರೂಪಿಸಲು ಸಾಕಷ್ಟು ಬೆವರು ಹರಿಸುತ್ತಿರುವುದರ ಹಿಂದಿನ ಗುಟ್ಟು , ಇದೆ ಕಿಮ್ಮನೆ ರತ್ನಾಕರ್ ನ ಅಧಿಕಾರ ಮತ್ತು ನ್ಯಾಷನಲ್ ಬ್ರದರ್ನನ  ಹಣ ಎಂದು ಚಿಕ್ಕ ಮಕ್ಕಳು ಕೂಡ ಹೇಳುತ್ತಿದ್ದಾರೆ...
ಕೆಲವು ವರ್ಷದ ಹಿಂದೆ ತೀರ್ಥಹಳ್ಳಿ ಸುತ್ತಮುತ್ತಲ ಊರುಗಳಾದ , ಕುಂದಾದ್ರಿ ಬೆಟ್ಟಕ್ಕೆ , ಕುಪ್ಪಳಿ ಕಾಡಿಗೆ ಏಕಾಂತ ಅರಸಿ ಬರುತ್ತಿದ್ದ ಯುವ ಜೋಡಿಗಳನ್ನ , ಥಳಿಸಿ , ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಒಂದು ತಂಡವೆ ಅಸ್ತಿತ್ವದಲ್ಲಿತ್ತು , ಕಾಲ ಕ್ರಮೇಣ ಇಂತಹ ಘಟನೆಗೆ ಅಂಜಿದ ಜೋಡಿಗಳು ಅಂತಹ ಜಾಗಕ್ಕೆ ಹೋಗಲು ನಿಲ್ಲಿಸದವೋ , ಆ ತಂಡಗಳು ತಮ್ಮ ಕೆಲಸ ಶುರು ಮಾಡಿದ್ದು ತೀರ್ಥಹಳ್ಳಿ ಊರಿನಲ್ಲಿಯೇ , ಹೈ ಸ್ಕೂಲ್ ಗೆ ಹೋಗುವ  ಹೆಣ್ಣು ಮಕ್ಕಳನ್ನು , ಪರಿಚಯ ಮಾಡಿಕೊಳ್ಳುವುದು , ಅವರಿಗೆ ಮೊಬೈಲ್ , ಚಾಕಲೇಟ್ ಆಸೆ ತೋರಿಸಿ , ಲೈಂಗಿಕವಾಗಿ ಬಳಸಿಕೊಳ್ಳುವುದು , ಮೊಬೈಲ್ , ಚಾಕಲೇಟ್ ಆಮಿಷಕ್ಕೆ ಬೀಳದ ಹುಡುಗಿಯರನ್ನ , ಮಾದಕ ಪದಾರ್ಥ ಕೊಟ್ಟು  ಉಪಯೋಗಿಸಿಕೊಳ್ಳುವುದು , ಅದನ್ನ ವೀಡಿಯೊ ಮಾಡಿ ಬ್ಲಾಕ್ ಮೇಲ್ ಮಾಡುವುದು ... ಇದೆ ಬ್ಲಾಕ್ಮೇಲ್ ಗೆ ಭಯ ಬೀಳುವ ಹೆಣ್ಣು ಮಕ್ಕಳನ್ನ , ಪದೇ ಪದೇ ಸಾಮೂಹಿಕ ಅತ್ಯಾಚಾರಕ್ಕೆ ಇಡು ಮಾಡುವುದು. ಇಂತಹ ಬಹಳಷ್ಟು ಬೆಳಕಿಗೆ ಬಾರದೆ ಮುಚ್ಚಿ ಹೋಗಿವೆ  .. ಈಗ್ಗೆ ಒಂದು ವರ್ಷದ ಹಿಂದೆ ಬೆಳಕಿಗೆ ಬಂದ ಪ್ರಕರಣದಲ್ಲೂ ಹೀಗೆ ಆಗಿತ್ತು , ಪದೇ ಪದೇ ತನ್ನ ಮೇಲೆ ನಡೆದ ದೌರ್ಜನ್ಯ ಸಹಿಸದ ಬಾಲಕಿ , ತನ್ನ ಪೋಷಕರಲ್ಲಿ ಹೇಳಿಕೊಂಡರೆ , ಮರ್ಯಾದೆಗೆ ಅಂಜಿದ ಪೋಷಕರು .. ಆ ವಿಷಯವನ್ನೇ ಮುಚ್ಚಿ ಹಾಕಿದ್ದರು .. ನಂದಿತಾ ಪ್ರಕರಣ ಇದಕ್ಕಿಂತ ಬಿನ್ನವೇನು ಅಲ್ಲ .. ಒಂದು ಪಕ್ಷ ಆಕೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನ , ಕಟ್ಟಿಗೆ ಆರಿಸಲು ಬಂದಿದ್ದ ತುಡ್ಕಿ ಗ್ರಾಮದ ಜನ ನೋಡದೆ ಇದ್ದಿದ್ದರೆ , ಈ ಪ್ರಕರಣ ಕೂಡ ಮುಚ್ಚಿ ಹೋಗುತ್ತಿದ್ದರಲ್ಲಿ ಸಂಶಯ ಇಲ್ಲ.. ತೀರ ಅಸ್ವಸ್ತ ಗೊಂಡಿದ್ದ ಬಾಲಕಿ , ಆಸ್ಪತ್ರೆ ಸೇರಿದ್ದು , ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು ಬೆಳಕಿಗೆ ಬಂದಿದ್ದೆ , ಆಕೆ ಸತ್ತ ನಂತರ ... ತೀರ್ಥಹಳ್ಳಿ ಪೊಲೀಸರು ಎಷ್ಟರ ಮಟ್ಟಿಗೆ ಕ್ರಿಯಾಶೀಲರು ಅಂದರೆ , ನಂದಿತಾ ಳ ತಂದೆ ಬಂದು ಕಂಪ್ಲೇಂಟ್ ಕೊಡುವವರೆಗೂ , ಕುರ್ಚಿಗೆ ಹೊಡಿಸಿಕೊಂಡಿದ್ದ ಮೊಳೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ .
ನಂದಿತಾ ಳ ಕೊಲೆ ಪ್ರಕರಣ ಮುಚ್ಚಿ ಹಾಕಲು ಮೊದಲು ತೇಲಿಸಿದ ಕಥೆ ಏನೆಂದರೆ “ ನಂದಿತಾ ಳಿಗೂ ಕೊಲೆ ಆರೋಪಿ ಹುಡುಗನಿಗೂ ಆಕೆಗೂ ಅನೈತಿಕ ಸಂಭಂದ ಇತ್ತು, ಆಕೆಯ ಇಚ್ಛೆ ಮೇರೆಗೆ ಆನಂದ ಗಿರಿಯಲ್ಲಿ , ಇಬ್ಬರು ಕೇಳಿಯಲ್ಲಿ ತೊಡಗಿದ್ದರು ಅದನ್ನ ಕಂಡ ಗ್ರಾಮಸ್ತರು ಆಕೆಯ ಮನೆಗೆ ವಿಷಯ ತಿಳಿಸಿದ್ದಾರೆ , ಮನೆಗೆ ಕರೆದುಕೊಂಡ ಪೋಷಕರು ಆಕೆಗೆ ಥಳಿಸಿದ್ದಾರೆ , ಆ ಅವಮಾನಕ್ಕೆ ಅಂಜಿದ ಹುಡುಗಿ ವಿಷ ಸೇವೆಸಿ ಪ್ರಾಣ ಬಿಟ್ಟಿದ್ದಾಳೆ “.- ಮನುಷ್ಯತ್ವ ಇರುವ ಯಾರಾದರು ಆಡುವ ಮಾತ ಇದು ? ೧೩ ವಯಸ್ಸಿನ ಹುಡುಗಿಯನ್ನ ಅನಾಯಾಸವಾಗಿ ಅನೈತಿಕತೆಗೆ ಇಳಿಸಿ ಬಿಟ್ಟರು .. ಆದರೆ ಬಾಲಕಿ ಮೇಲೆ ನಡೆಯುವ ಸಮ್ಮತಿ ಕಾಮ ಕೂಡ ಅತ್ಯಾಚಾರ ಅನ್ನಿಸಿಕೊಳ್ಳುತ್ತದೆ ಅಂತ ಯಾವಾಗ ಈ ದುರುಳರಿಗೆ ಹೊಳೆಯಿತೋ ತಕ್ಷಣ ಕಥೆ ಬದಲಾವಣೆ ಆಯ್ತು.
ಈಗ ಚಾಲ್ತಿಯಲ್ಲಿರುವ ಕಥೆ ಪ್ರಕಾರ “ ನಂದಿತಾ ತಾನು ಸರಿಯಾಗಿ ಓದುತ್ತಿಲ್ಲ ಅಂತ ಅರಿವಾಗಿ (ನೆನಪಿರಲಿ ಪರೀಕ್ಷೆ ನಡೆಯಲು ಇನ್ನು ೫ ತಿಂಗಳು ಬಾಕಿ ಇದೆ ) ಒಂದು ಪತ್ರವನ್ನ ಸ್ವಚ್ಛ ಕನ್ನಡದಲ್ಲಿ ಟೈಪ್ ಮಾಡಿಸಿ , ಪ್ರಿಂಟ್ ತೆಗಿಸಿ , ಬ್ಯಾಗ್ ನಲ್ಲಿ ಇಟ್ಟುಕೊಂಡು , ಆನಂದ ಗಿರಿಗೆ ಹೋಗಿ ವಿಷ ತೆಗೆದು ಕೊಂಡಳಂತೆ .. – ೧೩ ವರ್ಷದ ಬಾಲಕಿ ಡೆತ್ ನೋಟ್ ಟೈಪ್ ಮಾಡಿಸಿ ಇಟ್ಟುಕೊಳ್ಳುವುದು ಸಾದ್ಯವೇ ಎಂದು ಎಲ್ಲ ಕ್ಯಾಕರಿಸಿ ಉಗಿದ ಮೇಲೆ , ಪೊಲೀಸರು ತೀರಿ ಕೊಂಡ, ಹುಡುಗಿಯನ್ನ ಮತ್ತೆ ಬದುಕಿಸಿ , ಆಕೆಯ ಕೈಯಿಂದ ಮತ್ತೊಂದು ಡೆತ್ ನೋಟ್ ಬರೆಸಿ , ಹಾಜರು ಪಡಿಸಿದ್ದಾರೆ ... ಆಹಾ ಒಂದು ಕೇಸ್ ಮುಚ್ಚಿ ಹಾಕಲು ಎಂತ ಪ್ರಯತ್ನ .. ಇವರೇನು ತಿರ್ಥಹಳ್ಳಿಯ ಜನರನ್ನ ಮೂರ್ಖರು ಅಂತ ಭಾವಿಸಿದ್ದಾರೆ ಅಂತ ಅನ್ನಿಸುತ್ತದೆ . ಮಾದ್ಯಮಕ್ಕೆ ಬಿಡುಗಡೆ ಮಾಡಿದ್ದ ಟೈಪ್ ಮಾಡಿದ ಪತ್ರ & ಅದು ಸರಿಯಾಗಿಲ್ಲ ಎಂದು ಅದರ ಹಿಂದೆಯೇ ಬಂದ ಹಸ್ತಾಕ್ಷರ ದ ಪತ್ರ  ಯಾರ ಸೃಷ್ಟಿ ಅಂತ ಹೊಸದಾಗಿ ಹೇಳಬೇಕಿಲ್ಲ ಅಲ್ಲವೇ ?

ಪ್ರೀತಿಯ ಕಿಮ್ಮನೆ ಅವರೇ , ನಿಮ್ಮಿಂದ ಈ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ಆಗಲಿಲ್ಲ , ತೀರ್ಥಹಳ್ಳಿಯ ಇಡಿ ತಾಲೂಕಿಗೆ ಒಂದೇ ಒಂದು ಮಾದರಿ ಶಾಲೆ ಮಾಡಲು ನಿಮ್ಮ ಕೈಯಲ್ಲಿ ಆಗಲಿಲ್ಲ .. ನಿಮ್ಮದೇ ಮೂಗಿನಡಿಯ ಶಾಲೆಗಳಲ್ಲಿ ಅತ್ಯಾಚಾರ ನಡೆಯುತ್ತಿದ್ದರು ನಿಮ್ಮಿಂದ ಅದನ್ನ ನಿಲ್ಲಿಸಲು ಆಗಲಿಲ್ಲ , ಇಷ್ಟೆಲ್ಲಾ ಇದ್ದರು ನಾವು ನಿಮ್ಮ ಕೊರಳ ಪಟ್ಟಿ ಹಿಡಿದು ಕೇಳಿರಲಿಲ್ಲ ... ಆದರೆ ಇಂದು ನೀವು ರಕ್ಷಿಸಲು ಪ್ರಯತ್ನಿಸುತ್ತಿರುವುದು , ಒಂದು ಎಳೆ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಿದ ಕಾಮುಕರನ್ನ .. ಅವರು ಯಾವುದೇ ಧರ್ಮಕ್ಕೆ ಸೇರಿರಲಿ , ಎಷ್ಟೇ ಶ್ರೀಮಂತರಿರಲಿ .. ಆ ಹೆಣ್ಣು ಮಗಳ ಘೋರ ಸಾವಿಗೆ ಬೆಲೆ ಕೊಡಿ .. ನಿಮ್ಮ ಮಗಳ ಮೇಲೆಯೇ ಇಂತಹದೊಂದು ದೌರ್ಜನ್ಯ ನಡೆದಿದ್ದರೆ , ನಿಮ್ಮ ನಡೆ ಹೀಗೆಯೇ ಇರುತ್ತಿತ್ತೆ ? , ನಮ್ಮ ಸಹನೆಗೂ ಒಂದು ಮಿತಿ ಇದೆ , ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಈಗಲೇ ಕೈ ಬಿಡಿ.. ಇಲ್ಲದೆ ಹೋದರೆ ತೀರ್ಥಹಳ್ಳಿ ರಾಜಕೀಯ ಇತಿಹಾಸದಲ್ಲೇ ನೀವೊಬ್ಬ , ಆಯೋಗ್ಯ , ಭ್ರಷ್ಟ , ಚಾರಿತ್ರ್ಯ ಹೀನ ರಾಜಕಾರಣಿ ಆಗಿ ದಾಖಲಾಗುತ್ತಿರ  ಎಂಬುದು ನೆನಪಿರಲಿ .. ನಿಮ್ಮನ್ನು ಬೆಂಬಲಿಸಲು , ನಿಮ್ಮದೇ ಪಕ್ಷದ ಯಾರೊಬ್ಬರು ಕೂಡ ಮುಂದೆ ಬರುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕಿರಲಿ ..

ಕೊನೆಯದಾಗಿ , ಪ್ರೀತಿಯ ನಂದಿತಾ, ಮತ್ತೆ ಹುಟ್ಟಿ ಬಾ ಎಂದು ಹೇಳುವ ಯೋಗ್ಯತೆ ನಮಗಿಲ್ಲ .. ನಿನ್ನ ಈ ಜನ್ಮದಲ್ಲೇ ಘೋರ ಸಾವಿನಿಂದ ತಪ್ಪಿಸಲು ಆಗದ ನಮಗೆ , ನಿನ್ನ ಮುಂದಿನ ಜನ್ಮದ ಬಗ್ಗೆ ಹೇಳುವ ಯಾವ ಯೋಗ್ಯತೆ ಇದೆ ? , ನಿನ್ನ ಸಾವಿನಲ್ಲಿ ಬೇಳೆ ಬೇಯಿಸಲು ಪ್ರಯತ್ನಿಸುತ್ತಿರುವ ಕಿಮ್ಮನೆ ಅಂತಹ ನೀಚ ರಾಜಕಾರಣಿಯ ಮೇಲೆ, ನಿನ್ನ ಗೋರಿಯ ಮೇಲೆ ಹಣ ಮಾಡಲು ಹೊರಟಿರುವ ಪೋಲೀಸರ ಮೇಲೆ , ನಿನ್ನ ಸಾವಿಗೂ ಬೆಲೆ ಕಟ್ಟಿ , ಪ್ರಕರಣವನ್ನೇ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ದುಷ್ಟರ ಮೇಲೆ  ನಿನ್ನ ಬಿಸಿ ಕಣ್ಣಿರ ಶಾಪ ತಗುಲಲಿ ..
 ನಿನ್ನ ಅನ್ಯಾಯದ ಸಾವಿಗೆ, ನಿನ್ನ ಉಳಿಸಿಕೊಳ್ಳಲು ಆಗದ ನಮ್ಮ ಅಸಹಾಯಕತೆಗೆ , ನನ್ನ ಎರಡು ಕಂಬನಿ ಹನಿಗಳು ಮೀಸಲು .. 


ಗುರುವಾರ, ಡಿಸೆಂಬರ್ 5, 2013

ಸೌಹಾರ್ದಗಿತ್ತಿ ಮತ್ತು ಲಿಪ್ ಸ್ಟಿಕ್


ಅದು ಯಾರದೋ ಮನೆಯ ಅಂಗಳ.... ಅಂಗಳದ ಮಧ್ಯ ಏಟು ತಿನ್ನುತ್ತ ಬಿದ್ದಿರುವ ಒಬ್ಬ ವ್ಯಕ್ತಿ , ಆತನ ಹಣೆಯ ಮೇಲೆ “ ಸೆಕ್ಯುಲರ್ ಪತ್ರಕರ್ತ” ಅಂತ ಬರೆದಿದೆ .

ಆತನ ಸುತ್ತ ಆತನಿಗೆ ಥಳಿಸುತ್ತಿರೋ ೩೦ – ೪೦ ಯುವಕರು , ಅವರೆಲ್ಲರ ಹಣೆಯ ಮೇಲೆ “ಅಮಾಯಕ ಸೆಕ್ಯುಲರ್ ಯುವಕರು” ಅಂತ ಬರೆದಿದೆ.... ಅಮಾಯಕ  ಯುವಕರ ಥಳಿತಕ್ಕೆ, ಸೆಕ್ಯುಲರ್ ಪತ್ರಕರ್ತ ಹೈರಾಣಾಗಿ ಹೋಗಿದ್ದಾನೆ . ಆತನ ಮುಖದ ತುಂಬೆಲ್ಲ ರಕ್ತದ ಛಾಯೆ , ಮೂಗು , ಬಾಯಲ್ಲಿ ಧಾರಾಕಾರ ರಕ್ತ ಸುರಿಯುತ್ತಿದೆ. ಆತ ಅಕ್ಷರಶಃ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. 
ಅನತಿ ದೂರದಲ್ಲಿ ಒಬ್ಬಳು ಮಹಿಳೆ , ಇವರತ್ತ ಕೂಗುತ್ತಿದ್ದಾಳೆ. ಅವಳ ಹಣೆಯ ಮೇಲೆ “ಸೌಹಾರ್ದಗಿತ್ತಿ” ಅಂತ ಬರೆದಿದೆ... ಆಕೆ ಕೂಗುತ್ತಿರುವುದು ಪತ್ರಕರ್ತನನ್ನ ಉದ್ದೇಶಿಸಿ, ಆಕೆ ಚೀರುತ್ತಿದ್ದಾಳೆ “ ನಿನ್ನ ಮೇಲೆ ದಾಳಿ ಮಾಡಿರುವುದು ತಾಲಿಬಾಲಿನಿಯರಲ್ಲ , ಪಾಕಿಸ್ತಾನಿಯರಲ್ಲ, ಅವರೆಲ್ಲ ಭಾರತೀಯರು, ಸೆಕ್ಯುಲರ್ಗಳು , ಅಮಾಯಕರು .... ಯಾವುದೇ ಕಾರಣಕ್ಕೂ ಪ್ರತಿರೋಧ ತೋರಬೇಡ .... ಪ್ರತಿರೋಧ ತೋರಿದರೆ ನೀನು ಕೋಮುವಾದಿ ಆಗಿಬಿಡುತ್ತಿಯ.... ನೋವಾದರೂ , ಅವಮಾನ ಆದರು ಸಹಿಸಿಕೋ ... ಆದರೆ ಪ್ರತಿರೋಧ ತೋರಿ ಕೋಮುವಾದಿ ಆಗಬೇಡ “ ಎಂದು ಚೀರಿ ಚೀರಿ ಹೇಳುತ್ತಿದ್ದಳು .... 
ಸೌಹರ್ದಗಿತ್ತಿಯ ಮಾತು ಪತ್ರಕರ್ತನಿಗೆ ಎಷ್ಟು ಕೇಳಿತೋ, ಏನೋ ... ಆತ ನೋವಿನಿಂದ ಪ್ರಜ್ಞೆ ಕಳೆದುಕೊಂಡ.

ಥಳಿಸಿ ಥಳಿಸಿ ಸುಸ್ತಾದ ಅಮಾಯಕ ಯುವಕರು ಸೌಹರ್ದಗಿತ್ತಿಯ ಬಳಿ ಸಾರಿದರು ...
ಅಮಾಯಕ ಯುವಕರಲ್ಲೊಬ್ಬ ಸೌಹರ್ದಗಿತ್ತಿಯ ನೋಡಿ “ ನೀವು ತುಂಬಾ ಚೆಂದ ಕಾಣುತ್ತಿದ್ದಿರ ಮೇಡಂ” ಎಂದ... ಸೌಹರ್ದಗಿತ್ತಿಗೆ  ಅಮಾಯಕ ಯುವಕರ ಮೇಲಿದ್ದ ಪ್ರೀತಿ ಒಂದು ಇಂಚು ಜಾಸ್ತಿ ಆಯ್ತು.
ಮುಂದುವರಿದ ಯುವಕ “ ಮೇಡಂ ನಿಮ್ಮ ಡ್ರೆಸ್ಸ್ ಗೆ ಮತ್ತು ಲಿಪ್ ಸ್ಟಿಕ್ ಸರಿ ಹೊಂದುತ್ತಿಲ್ಲ ಅಂದ.... ಈಗ ಸೌಹರ್ದಗಿತ್ತಿಯ ಮುಖ ಕಪ್ಪಿಟ್ಟಿತು , ಒಂದು ವಿಷಾದದ ಛಾಯೆ ಮುಖ ಆವರಿಸಿತು... ಅಷ್ಟು ಹೊತ್ತು ಆಕೆಗಿರದಿದ್ದ ಕಳವಳ ಈಗ ಶುರುವಾಗಿತ್ತು. ಈ ಡ್ರೆಸ್ಸ್ ಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಚೆನ್ನಾಗಿ ಹೊಂದುತ್ತೆ ಅಂದ ಅದೇ ಅಮಾಯಕ. 

ಸೌಹಾರ್ದಗಿತ್ತಿ ತನ್ನ ಬ್ಯಾಗ್ ಎಲ್ಲ ಹುಡುಕಿದಳು ... ಇಲ್ಲ ಕೆಂಪು ಬಣ್ಣದ ಲಿಪ್ ಸ್ಟಿಕ್ ತಂದಿಲ್ಲ !!!!!!.... ಛೆ ಎಂತ ತಪ್ಪು ನಡೆದು ಹೋಯಿತು ಅಂದು ಕೊಂಡವಳ ದೃಷ್ಟಿ ಏಟು ತಿಂದು ಅರೆಶವ ಆಗಿದ್ದ ಪತ್ರಕರ್ತನ ಕಡೆ ಹೋಯಿತು....
ಸೀದಾ ಪರ್ತಕರ್ತನ ಬಳಿ ನಡೆದವಳೇ , ಆತನ ಮುಖದಿಂದ ಇಳಿಯುತ್ತಿದ್ದ ರಕ್ತವ ತನ್ನ ಬೆರಳಿನಿಂದ ಬಳಿದು ತುಟಿಗೆ ಸವರಿಕೊಂಡು , ಅಮಾಯಕ ಯುವಕರ ಕಡೆ ತಿರುಗಿ ಕೇಳಿದಳು “ ಈಗ ಹೇಗಿದೆ ...? “

“ಅದ್ಭುತ “ ಅನ್ನೋ ಉತ್ತರ ಬಂತು ಅಮಾಯಕ ಯುವಕರ ಕಡೆಯಿಂದ ....

ಮಂಗಳವಾರ, ನವೆಂಬರ್ 26, 2013

ಭಯೋತ್ಪಾದಕಿ ಆಯಿಶಾ ಬಾನು !? ಮತ್ತು ನಸೂ ಎಂಬ ಪತ್ರಕರ್ತ

ಪತ್ರಕರ್ತನಿಗೆ ಕಾಮನ್ ಸೆನ್ಸ್ ಇರಬೇಕ ? ಎಂದು ಯಾರದರು ಪ್ರಶ್ನಿಸಿದರೆ ನನ್ನ ಉತ್ತರ, ಖಂಡಿತ ಅಗತ್ಯ ಇಲ್ಲ . ಕಾನೂನಿನ ಪರಿಜ್ಞಾನವೇ ಇಲ್ಲದ ಎಷ್ಟೋ ಜನ ಇಂದು ಪತ್ರಕರ್ತರು ಅನ್ನಿಸಿಕೊಂಡಿದ್ದಾರೆ . ಉದಾರಣೆ ಬೇಕಾ  ? ದಯವಿಟ್ಟು ಭೇಟಿ ಮಾಡಿ , ಮಂಗಳೂರಿನ ಕ್ಯಾತ ಪತ್ರಕರ್ತ ನಸೂ ಅಲಿಯಾಸ್ ನಸ  (ಇದರ ಅರ್ಥ ಕೊನೆಯಲ್ಲಿ ಹೇಳ್ತಿನಿ )... ಈ ಮನುಷ್ಯನ ಹಳವಂಡ ಏನೇ ಇರಲಿ , ಈಗ ವಿಷಯಕ್ಕೆ ಬರೋಣ .


 ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ    ಅನ್ನೋ ಲೇಖನ ವರ್ತಮಾನದಲ್ಲಿ ಪ್ರಕಟವಾಗುತ್ತೆ , ಬರೆದವರು ನಮ್ಮ ಪ್ರೀತಿಯ ನಸ.
ಇಡಿ ಲೇಖನ ಸುತ್ತಿದ್ದು ಅಯೆಶು ಬಾನುಳ ಇತಿಹಾಸ ಮತ್ತು ೨ ಮಕ್ಕಳು ಕೊಟ್ಟು ಪರಾರಿ ಆದ ಪತಿರಾಯ ಮತ್ತು ಅವಳನ್ನು ನೋಡಿಕೊಂಡ DYFI ಸಂಘಟನೆ ಸುತ್ತ... ಅಪರೂಪಕ್ಕೆ ಸಂಘಟನೆ ಒಂದು ಒಳ್ಳೆ ಕೆಲಸ ಮಾಡಿದೆ ಶ್ಲಾಘಿಸೋಣ ಆದರೆ ಲೇಖನದ ಕೊನೆಯ ಪ್ಯಾರ ಇದೆಯಲ್ಲ , ಅದು ಸುಳ್ಳುಗಳ ಸಂತೆ.
ಪಾಪ ಬಡ ದಂಪತಿಗಳು ಹುಂಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರಂತೆ 
 ಹುಂಡಿ ವ್ಯವಹಾರ ಅನ್ನೋದು ಸಂಪೂರ್ಣ ವಿಶ್ವಾಸದ ಮೇಲೆ ನಡೆಯೋ ದಂದೆ . ಎಲ್ಲೋ ಕೊಟ್ಟ ಇನ್ನೆಲ್ಲೋ ತಲುಪುತ್ತೆ ಅಂದರೆ ಅದರ ನೆಟ್ವರ್ಕ್ ಬಗ್ಗೆ ಯೋಚಿಸಿ ? ಸುಖಾ  ಸುಮ್ಮನೆ ಯಾರು ಯಾರು ಕೈಗೂ ಹಣ ಕೊಡುವುದಿಲ್ಲ ಅಲ್ಲವೇ ? ಹುಂಡಿ ವ್ಯವಹಾರ ಮಾಡಲು ಆಯೇಶ ಮತ್ತು ಆಕೆ ಪತಿಗೆ ಇದ್ದ ಯೋಗ್ಯತೆ ಏನು ? ಇರಲು ಒಂದು ಮನೆಯು ಇಲ್ಲದ ಆಕೆಗೆ ಕೋಟಿ ಕೋಟಿ ಹಣ ಹಂಚಲು ಕೊಡುತ್ತಾರೆ ಎಂದರೆ ನಂಬಲು ಸಾದ್ಯವೇ ?
ಇರಲಿ ಕೊಟ್ಟರು ಅಂದುಕೊಳ್ಳೋಣ ಆಕೆಗೆ ಬಿಹಾರದವರೆಗೆ ನೆಟ್ವರ್ಕ್ ಬೆಳೆದಿದ್ದಾರು ಹೇಗೆ ? ಬಿಹಾರಕ್ಕೆ ಹಣ ಸಾಗಿಸಲು ಸ್ವಂತ ಮನೆಯು ಇಲ್ಲದ ಮಂಗಳೂರಿನ ಗೃಹಿಣಿ ಯೇ ಬೇಕಿತ್ತೆ ? ಬಿಹಾರದಲ್ಲಿ ಯಾರು ಈ ದಂದೆ ಮಾಡುವವರು ಇಲ್ಲವೇ ? ಅದು ಕೋಟಿ ಲೆಕ್ಕದಲ್ಲಿ ...
ಹವಾಲ ಹಣ ಯಾರಿಗೆ ಸೇರುತ್ತಿದೆ ಅಂತ ಜುಬೇರ್ ದಂಪತಿಗೆ ಗೊತ್ತಿರಲಿಲ್ಲ ಅಂತ ನಸ ಹೇಳುತ್ತಾರೆ . ಅದೇ ಮೇಲಿನ ಪ್ಯಾರದಲ್ಲಿ ಬಡಪಾಯಿ ಮುಸ್ಲಿಂ ಯುವಕರು ಕೂಲಿ ನಾಲಿ ಮಾಡಿ ಮನೆಗೆ ತೆರಿಗೆ ತಪ್ಪಿಸಲು ಹಣ ಕಳಿಸುತ್ತಿದ್ದರು ಅಂತ ಉಲ್ಲೇಖಿಸಿದ್ದಾರೆ .   ಅಂದರೆ ಹಣ ಯಾರಿಗೆ ಕೊಡುತ್ತಿದ್ದೇವೆ ಜುಬೇರ್ ದಂಪತಿಗೆ ಗೊತ್ತಿಲ್ಲ ಅಂದರೆ ಪ್ರಾಮಾಣಿಕವಾಗಿ ದುಡಿದ ಹಣ ಅಲ್ಲ ಅಂತ ಅರ್ಥ ತಾನೇ... ಆ ಸಮಯದಲ್ಲೇ ಇದನ್ನ ನಿಲ್ಲಿಸಬಹುದಿತ್ತಲ್ಲ ? ಕೋಟಿ ಗಟ್ಟಲೆ ಹಣ ವರ್ಗಾವಣೆ ಮಾಡುವವರು ಅಷ್ಟೊಂದು ದಡ್ಡರು ಎಂದರೆ ನಂಬಲು ಸಾದ್ಯವೇ ?
ಇನ್ನು ಪೋಲಿಸ್ ರು ಅಧಿಕೃತವಾಗಿ ಏನು ಹೇಳಿಲ್ಲ ...... ಯಾರಿಗೆ ಹೇಳಿಲ್ಲ ? ನಿಮಗೆ ಹೇಳಬೇಕಿತ್ತೆ ? ವಾರಂಟ್ ಕೈಯಲ್ಲಿ ಹಿಡಿದು ಬರುವ ಅಧಿಕಾರಿ ಯಾರಿಗೆ ಹೇಳಬೇಕೋ ಅವರಿಗೆ ಹೇಳಿಯೇ ಬಂದಿರುತ್ತಾರೆ ....
 ಇನ್ನು ಬಂದಿಸಲು ಬಂದಿದ್ದು ಇಬ್ಬರೇ ಪೋಲಿಸ್ ರು .. ಸ್ವಾಮೀ  ಇದೇನು ವಿಕ್ರಮ್ ನ "ಅಪರಿಚತಡು " ಚಿತ್ರ ಅಲ್ಲ ... ಒಂದು ಹೆಂಗಸು ಮತ್ತು ಅದರ ತರಕಲಂಗಡಿ ಗಂಡನ ಬಂದಿಸೋಕ್ಕೆ ಇನ್ನೆಷ್ಟು ಜನ ಬೇಕು ? ಆಕೆ ಖಂಡಿತ ಕಿಂಗ್ ಪಿನ್ ಅಲ್ಲ , ಯಾರೋ ಕೈಯಿಂದ ಉಪಯೋಗಕ್ಕೊಳಗಾದ ಆಯುಧ ಅಂತ ಪೋಲಿಸ್ ರಿಗೆ ಚೆನ್ನಾಗಿ ಗೊತ್ತಿದೆ.
ನಿಮ್ಮ ಲೇಖನದ ಕೊನೆಯ ಲೈನ್ ಖಂಡಿತ ಒಪ್ಪುತ್ತೇನೆ , ಸುಳ್ಳು ಪ್ರೀತಿಯ ನಾಟಕ ಆಡುವವರ  ಹಿಂದೆ ಹೋದರೆ ಕೊನೆಗೆ ಎಲ್ಲಿಗೆ ಸೇರುತ್ತಾರೆ ಅನ್ನೋದಕ್ಕೆ ಆಕೆ ಸಾಕ್ಷಿ ಆದಳು ಅಷ್ಟೇ ...

ಇನ್ನು ನಿನ್ನೆ ನಸು ಫೇಸ್ಬುಕ್ ಲ್ಲಿ ಕೊಟ್ಟ ಸಮಜಾಯಿಷಿ ಹೀಗಿದೆ "  ಕರ್ನಾಟಕ ಪೋಲಿಸ್ ಕಮಿಷನರ್ ಮತ್ತು ಬಿಹಾರ್ ಪೋಲಿಸ್ ರನ್ನ ಸಂಪರ್ಕಿಸಿದ್ದ ನಸುಗೆ , ಆಕೆಗೆ ಪಾಕಿಸ್ತಾನದಿಂದ ಹಣ ವರ್ಗಾವಣೆ ಆಗಿಲ್ಲ ಮತ್ತು ಆಕೆಯನ್ನ ಕೇವಲ ಹವಾಲ ವ್ಯವಹಾರದ ಕಾರಣಕ್ಕೆ ಬಂದಿಸಿದ್ದೇವೆ ಅಂತ ಹೇಳಿದ್ದರಂತೆ "
ಅಲ್ಲ ಸ್ವಾಮೀ ವಿಚಾರಣೆ ಮದ್ಯೆ ಯಾವ ಪೋಲಿಸ್ , ವಿಚಾರಣ ವಿಷಯಗಳನ್ನ ಬಿಟ್ಟುಕೊಡುತ್ತಾನೆ ? ಇಷ್ಟಕ್ಕೂ ನಸು ಅಂತಹ ಬೋರ್ಡಿಗಿಲ್ಲದ ಪತ್ರಕರ್ತರು ಕಾಲು ಕಾಲಿಗೆ ಸಿಗೋ ಈ ಕಾಲದಲ್ಲಿ . ಇಂತಹ ಸಾವಿರ ಪತ್ರಕರ್ತರು ಅವರನ್ನ  ಸಂಪರ್ಕಿಸಿರುತ್ತಾರೆ , ಎಲ್ಲರಿಗು ಸಮಜಾಯಿಸಿ ಕೊಡುತ್ತ ಯಾರು ಕೂತಿರುತ್ತಾರೆ ? ಅವರ ಏನೇ ಹೇಳಿದರು ಅವರ ಅಭಿಪ್ರಾಯ ಚಾರ್ಜ್ ಶೀಟ್ ದಾಖಲಿಸಿದ ಮೇಲೆಯೇ ಅಲ್ಲವೇ ಗೊತ್ತಾಗೋದು ? ನಸುಗೆ ಇಷ್ಟು ಗೊತ್ತಿಲ್ಲವೇ... ? ಅದು ಆರು ತಿಂಗಳು ಜೈಲ್ ಜೀವನ ಕಳೆದ ಮೇಲು ? ಆಶ್ಚರ್ಯ ...
ಒಂದು ಪಕ್ಷ ಪೋಲಿಸ್ ರು ನಸುಗೆ ಕೊಟ್ಟ ಮಾಹಿತಿ ಸತ್ಯ ಅಂತ ಇಟ್ಟುಕೊಳ್ಳೋಣ , ನಿಜ ಹೇಳಬೇಕೆಂದರೆ  ಭಯೋತ್ಪಾದಕರಿಗೆ ಹಣ ಬರುತ್ತಿರುವುದು ಅರಬ್ ನಿಂದಲೇ ಹೊರತು ಬಡ ಪಾಕಿಸ್ತಾನದಿಂದ ಅಲ್ಲ . ಅಲ್ಲಿಗೆ ಅದನ್ನು ಭಯೋತ್ಪಾದಕರಿಗೆ ಬಂದ ಹಣ ಅಲ್ಲ ಅಂತ ಹೇಳಲು ಸಾದ್ಯವಿಲ್ಲ .
ಆಕೆಗೆ ಯಾರ ಕೈಗೆ ಹಣ ಕೊಡುತ್ತಿದ್ದೇನೆ ಅಂತ ಗೊತ್ತಿಲ್ಲದೇ ಇರಬಹುದು ... ಆದರೆ ಹಣ ಪಡೆದವರು ಭಯೋತ್ಪಾದಕರು ಆಗಿರಬಹುದು ಅಲ್ಲವೇ ? ಇಲ್ಲ ಅನ್ನಲು ನಿಮ್ಮ ಪ್ರಕಾರ ಆಕೆಗೆ ಹಣ ತೆಗೆದುಕೊಂಡವರು ಯಾರು ಅಂತಾನೆ ಗೊತ್ತಿಲ್ಲ ... !!!!

ಒಂದು ಪಕ್ಷ ಆಕೆಗೆ ಭಯೋತ್ಪದಕರಿಗೆ ಹಣ ಕೊಡುತ್ತಿದ್ದೇನೆ ಅಂತ ಗೊತ್ತಿಲ್ಲದೇ,  ಹಣ ಕೊಟ್ಟರು ಕೂಡ ಅದು ಭಯೋತ್ಪಾದನೆಗೆ ಸಹಾಯಕ ಕೆಲಸವೇ ಅಲ್ಲವೇ ? ಭಯೋತ್ಪಾದಕರಿಗೆ ಸಹಾಯ ಮಾಡಿದವರನ್ನ  ಭಯೋತ್ಪದಕಿ ಅಂತ ಕರೆಯದೆ ಅಂಗನವಾಡಿ ಸಹಾಯಕಿ ಅಂತ ಕರೆಯಲು ಆಗದು ಅಲ್ಲವೇ ?
ಇನ್ನು ನೀವು ಹೇಳಿದ್ದನ್ನು ನಂಬೋಣ ಅಂದರೆ ನೀವು ಉಳಿಸಿಕೊಂಡಿರುವ ವಿಶ್ವಾರ್ಹತೆ ಆದರು ಏನು ? 
 ನಿಮ್ಮ ಯೋಗ್ಯತೆ ಬಗ್ಗೆ ಹೇಳಲು ಏನಿದೆ ? ಮಣಿಪಾಲ ರೇಪ್ ಕೇಸ್ ನ ಆರೋಪಿಯನ್ನ ಬಜರಂಗ ದಳದ ಕಾರ್ಯಕರ್ತನ ತಮ್ಮ ಎಂದು ನೀವು ಸುಳ್ಳು ಸುದ್ದಿ ಹಬ್ಬಿಸಿದ್ದು, ಅದು ಸುಳ್ಳು ಅಂತ ಗೊತ್ತಾದ ಕೂಡಲೇ , ಪೋಲಿಸ್ ರನ್ನ ಕಂಡು ಪರಾರಿ ಆಗುವ ಮೆಜೆಸ್ಟಿಕ್ ರಾತ್ರಿ ರಾಣಿಯರಂತೆ , ಫೇಸ್ಬುಕ್ ನ ಪೋಸ್ಟ್ ಡಿಲಿಟ್ ಮಾಡಿ ಓಡಿ ಹೋಗಿದ್ದು , ಇದನ್ನ ಕರ್ನಾಟಕದ ಜನ ಕೆಲವು ದಶಕ ಮರೆಯೋದಿಲ್ಲ ಬಿಡಿ , ಮಾಡಿದ ತಪ್ಪಿಗೆ ಒಂದು ಕ್ಷಮೆ ಕೇಳಬೇಕು ಅನ್ನೋ ನೈತಿಕತೆ ಕೂಡ ಇಲ್ಲದ ನೀವು , ದೊಡ್ಡ ಜನಗಳ ಬಗ್ಗೆ ತುಚ್ಚವಾಗಿ ಮಾತಾಡುವ ಧೈರ್ಯ ಪ್ರದರ್ಶಿಸುತ್ತಿರಿ . ಏನಾದರು ನಾಚಿಕೆ ಮಾನ ಅನ್ನೋದು ಏನಾದರು ನಿಮಗಿದೆಯೇ ?
ಪತ್ರಕರ್ತ ಆದವನಿಗೆ ಬುದ್ದಿ ಇಲ್ಲದೆ ಇದ್ದರು ಪರವಾಗಿಲ್ಲ , ಸೊಂಟದ ಕೆಳಗೆ ಇರಬಾರದು ... ಈಗ ನಿಮಗೆ ಇರೋದು ಅಲ್ಲೇನೆ ...  ಸ್ವಲ್ಪ ಅದನ್ನು ಮೇಲೆ ತಂದು ಕೊಳ್ಳುವ ಪ್ರಯತ್ನ ಮಾಡಿ.

ಇನ್ನು ಇಂತಹ ಘನಂದಾರಿ ಲೇಖನ ಪ್ರಕಟಿಸಿದ ವರ್ತಮಾನದ ರವಿ ಕೃಷ್ಣ ರೆಡ್ಡಿ ಯವರ ಬಳಿ ಬರೋಣ , ಎರಡು ಚುನಾವಣೆಗೆ ನಿಂತು ಹೋರಾಡಿದ ಧೀರ , ಭ್ರಷ್ಟಾಚಾರ ನಿಮೂರ್ಲನೆಗೆ ಮೇಲಿನಿಂದ ಉದುರಿ ಬಿದ್ದ ಸಾಕ್ಷಾತ್ ಶ್ರೀ ಕೃಷ್ಣನಂತೆ ಪೋಸ್ ಕೊಡುವ ರೆಡ್ಡಿಯವರೇ , ನಿಮಗೆ ಹವಾಲ ಹಣ ದಂಧೆ ಒಂದು ಭ್ರಷ್ಟಾಚಾರ ದ ಭಾಗ ಎಂದು ಗೊತ್ತಿಲ್ಲವೇ ? ಇದನ್ನು ನಿಮಗೆ ಸಂತೋಷ್ ಹೆಗ್ಡೆ  ರ  ಮೂಲಕವೇ ಹೇಳಿಸಬೇಕೆನು ? ಒಂದು ಹವಾಲ ದಂಧೆ ನಡೆಸುವವಳ (ಭಯೋತ್ಪಾದಕಿ ಬಿಟ್ಟುಬಿಡಿ ) ಪರ ವಕಾಲತ್ತು ನಡೆಸುವ ದರ್ದು ನಿಮಗೇನಿದೆ ? ನಾಳೆ ತಲೆಹಿಡುಕರ ಸಂಘದವರಿಗೂ ಲೇಖನ ಬರೆಯಲು ಅವಕಾಶ ಕೇಳಿದರೆ ಇಲ್ಲ ಅನ್ನದೆ ಅವಕಾಶ ಕೊಡುತ್ತಿರೆನೋ... ? ಅಲ್ಲವೇ ? ... ಇನ್ನೊಮ್ಮೆ ನಾನು ಭ್ರಷ್ಟಾಚಾರದ ವಿರುದ್ದ ಅಂತ ಹೇಳಿಕೆ ಕೊಡುವ ಮುನ್ನ ಅಕ್ಕ ಪಕ್ಕ ನೋಡಿಕೊಳ್ಳಿ , ಕೊಳೆತ ಮೊಟ್ಟೆ , ಟೊಮೇಟೊ ಬಿದ್ದವೋ ಮುಖದ ಮೇಲೆ .

ಕೊನೆ ಮಾತು : ದೇಶದ್ರೋಹಿಗಳ ಮುಂದೆ ಲಂಗೋಟಿ ಬಿಚ್ಚಿಕೊಂಡು ಓಡಾಡುವವರ ಮದ್ಯೆ , "ಚಡ್ಡಿ " ಹಾಕಿಕೊಂಡಿರುವವನೆ ಮರ್ಯಾದಸ್ಥ. 

ಚಿತ್ರಕೃಪೆ : ಭೂತಕಾಲದಲ್ಲಿರೋ "ವರ್ತಮಾನ"

ಭಾನುವಾರ, ಸೆಪ್ಟೆಂಬರ್ 22, 2013

ಭಾಷಾ ಚಳುವಳಿಗಳು ಮತ್ತು ನವ ವರ್ಣಾಶ್ರಮ

ಇತ್ತೀಚಿಗೆ ಒಂದು ವಿಶಿಷ್ಟ ಚರ್ಚೆಯಲ್ಲಿ ನಾನು ಭಾಗವಹಿಸಬೇಕಾದ ಅನಿವಾರ್ಯತೆಗೆ  ಸಿಲುಕಬೇಕಾಯಿತು , ಅದೇನೆಂದರೆ ಭಾಷಾ  ಪ್ರಾಮುಖ್ಯ ಚಳುವಳಿಗಳು ಹೇಗೆ ನವ ವರ್ಣಾಶ್ರಮವನ್ನ ಹುಟ್ಟುಹಾಕುತ್ತದೆ ಎಂದು.. ಈ ತರಹದ ಚರ್ಚೆಗೆ ಕಾರಣವಾದವರು ಕರವೇ ಸಂಘಟನೆಯ ಶ್ರೀಯುತ ದಿನೇಶ್ ಕುಮಾರ್ ಅವರು.  ಫೇಸ್ಬುಕ್ ನಲ್ಲಿ ಅವರು ಹಾಕಿದ್ದ ಒಂದು ಪೋಸ್ಟ್ ಮುಖಾಂತರ ಶುರುವಾದ ಚರ್ಚೆಯನ್ನು ಶ್ರೀಯುತರು ಮುಂದುವರಿಸಲು ಇಷ್ಟ ಪಡಲಿಲ್ಲ , ತೀರ ಒತ್ತಾಯ ಮಾಡಿದ್ದಕ್ಕೆ ನಾನು ಅವರಿಂದ ಅಸೃಷ್ಯ ಆಗಬೇಕಾಯಿತು.  ಇರಲಿ . ಅವರ ಪ್ರಕಾರ ಮನುಷ್ಯರ ಎರಡು ಕೈಗಳಲ್ಲಿ ಬಲಗೈ ಎಡಗೈ ಗಿಂತ ಶ್ರೇಷ್ಠ ಅನ್ನುವುದು ವರ್ಣಾಶ್ರಮದ ಪ್ರತೀಕ. ನಿಜ ಯಾವುದೋ ಒಂದನ್ನು ಇನ್ನೊಂದಕ್ಕೆ ಹೋಲಿಸಿ ಶ್ರೇಷ್ಠ ಅಥವಾ ನಿಕೃಷ್ಟ ಅನ್ನುವುದು ತಪ್ಪು ಆದರೆ ... ತಮ್ಮದೇ ಕೈಗಳ ಬಗ್ಗೆ ಇಷ್ಟು ಸ್ಮೂಕ್ಷ್ಮತೆ ಹೊಂದಿರುವ ಶ್ರೀಯುತರು ತಮ್ಮದೇ ಹೋರಾಟ ಹೇಗೆ ವರ್ಣಾಶ್ರಮ ಹುಟ್ಟುಹಾಕುತ್ತಿದೆ ಅನ್ನುವುದು ತಿಳಿದಿರಲಾರರೆ ..? ಇರಲಿ

ಭಾಷಾ ಚಳುವಳಿ ವಿಷಯಕ್ಕೆ ಬಂದರೆ ಮುಖ್ಯವಾಗಿ ಚರ್ಚೆಗೆ ಬರುವವರು ಇಬ್ಬರು ಒಬ್ಬರು ದ್ರಾವಿಡ ತಮಿಳು ಹೋರಾಟಗಾರ ಪೆರಿಯಾರ್ , ಮತ್ತೊಬ್ಬರು ಮರಾಟಿ  ಭಾಷಾ ಹೋರಾಟಗಾರ ಬಾಳ್ ಠಾಕ್ರೆ.

ಪೆರಿಯಾರ್ ಒಬ್ಬ ನಾಸ್ತಿಕ , ವೈದಿಕ ಸಮಾಜ , ಬ್ರಾಹ್ಮಣರನ್ನ ದ್ವೇಷಿಸುತ್ತಿದ್ದ ವ್ಯಕ್ತಿ , ಅದು ಎಷ್ಟರ ಮಟ್ಟಿಗೆ ಅಂದರೆ " ಒಬ್ಬ ಬ್ರಾಹ್ಮಣ ಮತ್ತು ಒಂದು ಹಾವು ಎದುರಿಗೆ ಬಂದರೆ , ಮೊದಲು ನಾನು ಕೊಲ್ಲುವುದು  ಬ್ರಾಹ್ಮಣನನ್ನ" ಅನ್ನುವಷ್ಟು. ಪೆರಿಯಾರ್ ಹಿಂದೂ ಸಮಾಜದಲ್ಲಿದ ಮೇಲು ಕೀಳು, ಬ್ರಾಹ್ಮಣ್ಯದಂತಹ ವಿಷಯಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು , ಅದರ ವಿರುದ್ದ ಅವರು " ಸ್ವಾಭಿಮಾನ ಚಳುವಳಿಗೆ" ಕರೆಕೊಟ್ಟವರು, ಹಾಗೆಯೇ  ತಮಿಳರ ಮೇಲಿನ ಹಿಂದಿ ಹೇರಿಕೆ, ಆರ್ಯರ ( ಉತ್ತರ ಭಾರತೀಯರ) ವಿರುದ್ದದ ಚಳುವಳಿಗಳನ್ನ ವ್ಯಾಪಕವಾಗಿ ನಡೆಸಿದವರು. ಒಂದು ಸಮಯದಲ್ಲಿ ಆರ್ಯರ ದೇವರುಗಳು ಕರೆಯಲ್ಪಡುತಿದ್ದ ರಾಮ ಕೃಷ್ಣರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸುತ್ತಿದ್ದರು ಪೆರಿಯಾರ್.
ಹಿಂದಿ ಹೇರಿಕೆಯಿಂದ ದ್ರಾವಿಡರ ಸಂಸ್ಕೃತಿಯನ್ನ  ಆರ್ಯರು ಕಲುಷಿತಗೊಳಿಸಲು ಪ್ರಯತಿಸುತ್ತಿದ್ದಾರೆ  ಅನ್ನುವುದು ಪೆರಿಯಾರ್ ಅವರ ವಾದವಾಗಿತ್ತು... ಅವರ ದ್ರಾವಿಡ ಚಳುವಳಿ ತಮಿಳು ನಾಡಿನ ಮಟ್ಟಿಗೆ ಒಂದು ಕ್ರಾಂತಿಗೆ ಕಾರಣವಾಯಿತು ಆದರೆ ....    ಯಾವ ದಿಕ್ಕಿನಿಂದ ನೋಡಿದರು ಪೆರಿಯಾರ್ ಮಾಡಿದ್ದು ಅದೇ ವರ್ಣಾಶ್ರಮದ ಸಮರ್ಥನೆಯೇ.  ಒಂದು ಕಡೆ ಬ್ರಾಹ್ಮಣರ ಮೇಲೆ ದ್ವೇಷ,  ಇನ್ನೊಂದು ಕಡೆ ತಮಿಳೇತರ  ಮೇಲೆ ಅಸಮಾಧಾನ ಇದು ಹೇಗೆ ಸಾಧ್ಯ ?. ಒಬ್ಬ ತಮಿಳು ಬ್ರಾಹ್ಮಣನನ್ನ ಆತ  ಬ್ರಾಹ್ಮಣ ಅನ್ನೋ ಕಾರಣಕ್ಕೆ ದ್ವೇಷಿಸಬೇಕಾ ? ಅಥವಾ ಆತ  ತಮಿಳಿಗ ಅನ್ನೋ ಕಾರಣಕ್ಕೆ ಅಪ್ಪಿಕೋಬೇಕ  ?  ಅಥವಾ ಆರ್ಯ ದಲಿತನನ್ನ ಆತ  ದಲಿತ ಅನ್ನೋ ಕಾರಣಕ್ಕಾಗಿ ಇಷ್ಟ ಪಡಬೇಕ ? ಅಥವಾ ಒಬ್ಬ ಆರ್ಯ ಅನ್ನೋ ಕಾರಣಕ್ಕೆ ದ್ವೇಷಿಸಬೇಕ ? ಬಹುಶ ಈ ವಿಷಯದ ಮೇಲೆ ಪೆರಿಯಾರ್ ಮಾತಾಡಿದ್ದು ನಾನು ಕೇಳಿಲ್ಲ.

ಬಾಳ್ ಠಾಕ್ರೆ ಯವರ ಶಿವಸೇನೆಯದು  ಇನ್ನೊಂದು ಮುಖ, ಒಂದು ಕಡೆ ಮರಾಟಿ ಗರೆಲ್ಲ ಒಂದಾಗಬೇಕು, ಆದರೆ ಅದರಲ್ಲಿ ಮುಸ್ಲಿಮರು ಹೊರತಾಗಬೇಕು ... ಇದು ಹೇಗೆ ಸಾದ್ಯ ? ಮರಾಟಿಗ ಅಥವಾ ತಮಿಳಿಗ  ಅಂದ ಮೇಲೆ ಮುಗಿಯಿತು ಆತ  ಹಿಂದುವೋ ಮುಸ್ಲಿಮನೋ ಪಾರ್ಸಿಯೋ, ಬ್ರಾಹ್ಮಣನೋ , ದಲಿತನೋ . ಆತನ ಧರ್ಮ, ಜಾತಿ  ಅಲ್ಲಿ ಮುಖ್ಯವಾಗಬಾರದು ಅಲ್ಲವೇ  ..?
ಈ ಜಿಜ್ನಾಸೆಯ ಬಗ್ಗೆ ಇನ್ನು ಹೇಳಬೇಕು ಅಂದರೆ ರೈತ ಸಂಘದ ವಿಷಯದಲ್ಲಿ ತೇಜಸ್ವಿ ಅವರಿಗೆ ಮತ್ತು ದೇವನೂರು ಅವರಿಗೆ ಇದ್ದ ಭಿನ್ನಾಭಿಪ್ರಾಯ ಉಲ್ಲೆಕಿಸಬಹುದು, ರೈತ ಸಂಘದಲ್ಲಿ ಮೀಸಲಾತಿ ಇರಬಾರದು, ರೈತರು ಅಂದ ಮೇಲೆ ಎಲ್ಲರು ಒಂದೇ  ಅನ್ನುವುದು ತೇಜಸ್ವಿ ಅವರ ವಾದ ಆದರೆ , ಮೇಲ್ಜಾತಿಯ ರೈತ , ದಲಿತ ರೈತನ ಶೋಷಣೆ ಮಾಡಬಹುದು, ಹಾಗಾಗಿ ರೈತ ಸಂಘದಲ್ಲಿ ಮೀಸಲಾತಿ ಬೇಕು ಅನ್ನುವುದು ದೇವನೂರರ ವಾದ. ಕೊನೆಗೆ ಈ ಜಿಜ್ನ್ಯಾಸೆ ರೈತ ಸಂಘದ ಸಮಾಪ್ತಿಯೊಂದಿಗೆ ಪರ್ಯವಪಸನಗೊಂಡಿದ್ದು ವಿಪರ್ಯಾಸ.
ಭಾಷೆ ಅನ್ನುವುದು ಹುಟ್ಟಿದ್ದೇ ಸಂವಹನಕ್ಕಾಗಿ, ಕನ್ನಡ ಪರಿಸರದಲ್ಲಿ ಹುಟ್ಟಿದ್ದ ನನಗೆ ಕನ್ನಡ ಕಲಿಯುವುದು ದೊಡ್ಡ ಸಾಧನೆ ಆಗಿರಲಿಲ್ಲ ಅದು ನನ್ನ ಅನಿವಾರ್ಯತೆ ಆಗಿತ್ತು ... ಹಾಗೆಯೇ ನಾನು ತಮಿಳು ಪರಿಸರದಲ್ಲಿ ಹುಟ್ಟಿದ್ದರೆ ನನ್ನ ಭಾಷೆ ತಮಿಳ್ ಆಗಿರುತ್ತಿತ್ತು, ಇದರಲ್ಲಿ ಶ್ರೇಷ್ಠತೆ ಏನಿದೆ ? ಯಾರು ಕೂಡ ಇಲ್ಲೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು  ಅಂತ ಅರ್ಜಿ ಹಾಕಿರುವುದಿಲ್ಲ, ಹಾಗಾದರೆ ನಮ್ಮ ಹುಟ್ಟು ಆಗಲಿ ಅಥವಾ ನಾವು ಆಡುವ ಮಾತಾಗಲಿ ನಮಗೆ ಶ್ರೇಷ್ಠತೆ ತಂದು ಕೊಡುವುದು ಹೇಗೆ ?
ಮಹಾರಾಷ್ಟ್ರದಲ್ಲಿ ಮರಾಟಿಗ ಶ್ರೇಷ್ಠ , ತಮಿಳುನಾಡಲ್ಲಿ ತಮಿಳಿಗ ಶ್ರೇಷ್ಠ , ಕರ್ನಾಟಕದಲ್ಲಿ ಕನ್ನಡಿಗ ಶ್ರೇಷ್ಠ .. ಇದು ವರ್ಣಶ್ರಮವಲ್ಲದೆ  ಇನ್ನೇನು ?
ಕನ್ನಡವನ್ನ ಧರ್ಮ ಎಂದು ಸ್ವೀಕರಿಸುವ , ಕನ್ನಡಕ್ಕೆ ಚ್ಯುತಿ ಬಂದರೆ ಜೀವ ಕೊಡುತ್ತೇವೆ ಅನ್ನುವವರಿಗೂ ,  ಹಿಂದೂ ಧರ್ಮಕ್ಕೆ ಚ್ಯುತಿ ಬಂದರೆ ಜೀವ ಕೊಡಲು ಸಿದ್ದ ಅನ್ನುವ RSS ಸಂಘ ಪರಿವಾರಗಳಿಗೆ ಏನು ವ್ಯತ್ಯಾಸ ? . RSS  ದು ಹಿಂದೂ ಕೋಮುವಾದ ಆದರೆ ಇವರದು ಕನ್ನಡ ಕೋಮುವಾದವೇ ?
ಕರ್ನಾಟಕದಲ್ಲಿ ಕನ್ನಡಿಗ ನೆಲೆ ಕಳೆದುಕೊಳ್ಳುತ್ತಿದ್ದಾನೆ ಅನ್ನುವಾಗ ಆಗುವ ನೋವು , ಹಿಂದೂಗಳು ಹಿಂದೂಸ್ಥಾನದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ ಅನ್ನುವ ನೋವಿಗಿಂತ ಹೇಗೆ ಬಿನ್ನ ?
ಇದು ಸಂಘಟನೆಗಳ ಸೈದ್ದಂತಿಕ ಘರ್ಷಣೆ ಅನ್ನಬಹುದು, ಎಂದಿಗೂ ಭಾಷೆ ನಮ್ಮ ಧರ್ಮ ಆಗಬಾರದು , ಮತ್ತು ಧರ್ಮ ನಮ್ಮ ಭಾಷೆ ಆಗಬಾರದು ... ಇದು ಸೈದ್ದಾಂತಿಕ ಗೊಂದಲ ಅನ್ನದೆ ಬೇರೆ ದಾರಿ ಇಲ್ಲ . ನಾನು ಕನ್ನಡ ಪರ  ಹೋರಾಟವನ್ನ ತಪ್ಪು ಅನ್ನುತ್ತಿಲ್ಲ ಆದರೆ ದಿನೇಶ್ ಕುಮಾರ್ ಅಂತವರು RSS  ಸಂಘಟನೆಗಳು ಮಾಡುತ್ತಿರುವ ಕೆಲಸವನ್ನ ಖಂಡಿಸುವ ಮುನ್ನ ತಾವು ಮಾಡುತ್ತಿರುವುದೇನು ಅನ್ನುವುದನ್ನ ಯೋಚಿಸಬೇಕು.. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವುದರ ಪರಿಣಾಮ ಅರಿತರೆ ಒಳ್ಳೆಯದು

ತಮಿಳುನಾಡಿಗೆ , ಮಹಾರಾಷ್ರಕ್ಕೆ ಹೋಲಿಸಿದರೆ ಕರ್ನಾಟಕ ಭಾಷಾಭಿಮಾನ ವಿಷಯದಲ್ಲಿ ದುರುದೃಷ್ಟ ರಾಜ್ಯ ಅನ್ನಬಹುದು, ಎರಡು ರಾಜ್ಯಗಳು ಭಾಷೆಯನ್ನ ತಳಹದಿ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡರೆ ಈ ರಾಜ್ಯದ ಜನ ಬಾಯಿ ಬಿಟ್ಟು ನೋಡುವುದು ಬಿಟ್ಟು ಇನ್ನೇನು ಮಾಡಲಾಗದ ಅಸಹಾಯಕತೆ ಹೊದ್ದು ಕೊಂಡರು  ಅಷ್ಟೇ... ಬೀದಿ ಬೀದಿಗೆ ಒಬ್ಬರು ಕನ್ನಡ ಹೋರಾಟಗಾರರು ಸಿಗುವ ಈ ನಾಡಿನಲ್ಲಿ ಕನ್ನಡ ಉದ್ದಾರ ಮಾಡಿದವರು ಎಷ್ಟು ಭಗವಂತ ಬಲ್ಲ. ಕನ್ನಡ ಕಾಳಜಿ ಬಿಟ್ಟು ಮತ್ತೆಲ್ಲ ಮಾತಾಡುವ ಚಂಪಾ , ನ್ಯೂಸ್ ಚಾನೆಲ್ ಗಳ ಪಾಲಿಗೆ ಜೋಕೆರ್ ತರಹ ಆಗಿರುವ ವಾಟಾಳ್ , ಕನ್ನಡವನ್ನೇ ಸರಿಯಾಗಿ ಮಾತಾಡಲು ಬಾರದ ನಾರಾಯಣ ಗೌಡರು ಇವರನ್ನೆಲ್ಲ ಕನ್ನಡದ ಕಟ್ಟಾಳುಗಳು ಅನ್ನೋ ಮನಸ್ಸು .. ಇವರ ಕೈಗೆ ನಮ್ಮ ಕನ್ನಡ ಅಭಿಮಾನ ಕೊಡಬಹುದು ಅನ್ನಿಸುತ್ತದೆಯೇ ?
ಕನ್ನಡ ರಕ್ಷಣೆ ಒಂದೇ ಗುರಿ ಆಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಇಷ್ಟೊಂದು ಬಣಗಳೇಕೆ ? ಪ್ರತಿಭಟನೆ ಒಂದು ಬಿಟ್ಟರೆ ಈ ಬಣಗಳು ಮಾಡಿರುವ ಘನಂದಾರಿ ಕೆಲಸವಾದರೂ ಏನು ? ಹೆಸರು ಕನ್ನಡ ಹೋರಾಟ ಆದರೆ ಬ್ಯಾನೆರ್ ತುಂಬಾ ಇವರದೇ ಮುಖ , ಇದು ಕನ್ನಡ ಅಭುದ್ಯಕ್ಕಾಗಿ  ಹೋರಾಟವೋ ಸ್ವಾಭುದ್ಯಕ್ಕಾಗಿ ಹೋರಾಟವೋ ?




ಬರಿ ಭಾಷಣದಲ್ಲಿಯೇ  ಮರಾಟಿಗರ , ತಮಿಳಿಗರ ಸ್ವಾಭಿಮಾನ ಕೆರಳಿಸುತ್ತಿದ್ದ ಪೆರಿಯಾರ್, ಠಾಕ್ರೆಗೆ ಸಮನಾದ ಒಬ್ಬನೇ ಒಬ್ಬ ಸೊ ಕಾಲ್ಡ್ ಕನ್ನಡ ಹೋರಾಟಗರ ಈ ರಾಜ್ಯದಲ್ಲಿ ಇಲ್ಲ.
ಕಾವೇರಿ ಹೋರಾಟಕ್ಕೆ ಕರಾವಳಿಗರ ಬೆಂಬಲ ಸಿಗದು, ಮಲಯಾಳಿಗಳ ದೌರ್ಜನ್ಯ ವಿರುದ್ದದ ಕೂಗು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರಬರದು, ಬೆಂಗಳೂರಿಗರ ತಮಿಳರ ಸಮಸ್ಯೆ , ಉತ್ತರ ಕರ್ನಾಟಕವನ್ನ ಬಾದಿಸದು, ಅವರ ಕೃಷ್ಣೆಯ ಕೂಗು ಬೆಂಗಳೂರು ಗೆ ತಲುಪದು. ಇಡಿ ಕರ್ನಾಟಕವನ್ನ ಒಂದೇ ಅನ್ನಿಸುವ ಭಾವನೆ ಬರಿಸಲು ಇವರ್ಯರಿಂದಲೂ ಸಾದ್ಯವಿಲ್ಲ.  
ಕನ್ನಡ ಸಂಘಟನೆಗಳು ಎಷ್ಟು ಕನ್ನಡ ಶಾಲೆಗಳನ್ನ ಪೋಷಿಸುತ್ತಿವೆ ? ಎಷ್ಟು ಕನ್ನಡ ಪುಸ್ತಕ ಪ್ರಕಟಿಸುತ್ತಿವೆ ? ಶಿವಸೇನೆಯ ಮುಖವಾಣಿ "ಸಾಮಾನ" ಸಾವಿರಾರು ಪ್ರತಿ ಮಾರಟವಾಗುತ್ತದೆ, ಆದರೆ ಕರವೇಯಾ "ನಲ್ನುಡಿ " ಕಣ್ಣಿಗೂ ಕಾಣದ ಗುಪ್ತಗಾಮಿನಿ ಆಗಿದೆ. ಕಣ್ಣಿಗೆ ಕಾಣದ ಪತ್ರಿಕೆಗೆ ಒಬ್ಬ ಸಂಪಾದಕರು ಬೇರೆ .  ಹಾಗಾದರೆ ಕನ್ನಡದ ಹೆಸರಲ್ಲಿ ಈ ಸಂಘಟನೆಗಳು  ಮಾಡುತ್ತಿರುವುದಾದರೂ ಏನು ?
ಹಾಲಿ ಮಂಡ್ಯ ಸಂಸದೆ ರಮ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರದಲ್ಲಿ ಮಾಡಿದ ತಮಿಳು ಭಾಷಣ  ನೆನಪಿರಬಹುದು.  ಅಂದು ಅಬ್ಬರಿಸಿದ್ದ ನಾರಾಯಣ ಗೌಡರನ್ನು ಆಕೆ ನೇರ ನೇರ ಹೀಗೆ ಟೀಕಿಸಿದ್ದರು , ಆದರೆ ನಾರಾಯಣ ಗೌಡರು ಮಾಡಿದ್ದೇನು ? ಆಕೆಯ ವಿರುದ್ದ ಉಗ್ರ ಹೋರಾಟ ದ ಬೆದರಿಕೆ ಹಾಕಿದ್ದ ಅವರು, ಆಕೆ ಮಂಡ್ಯ ಲೋಖಸಭಾ ಚುನಾವಣೆಗೆ ನಿಂತರೆ ಕಮಕ್ ಕಿಮಕ್ ಅನ್ನಲಿಲ್ಲ. ಕೊನೆಯ ಪಕ್ಷ ಆಕೆ ಹೇಳಿದಂತೆ ತನ್ನ ಮಕ್ಕಳು ಇಂಗ್ಲಿಷ್ ಮಾದ್ಯಮದಲ್ಲಿ ಓದುತ್ತಿಲ್ಲ ಅಂತ ಕೂಡ ಹೇಳಲಿಲ್ಲ , ಅಲ್ಲಿಗೆ ಮೌನಂ ಸಮ್ಮತಿ ಲಕ್ಷಣಂ ಅಂದ ಹಾಗಾಯ್ತು ಅಲ್ಲವೇ ?



ಚುನಾವಣಾ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಿಕ್ಕ ೪೨.೫ ಲಕ್ಷ ಅಕ್ರಮ ಹಣದ ಬಗ್ಗೆ ನಾರಾಯಣ ಗೌಡರು ಗುಲ್ಲಗದಂತೆ ನೋಡಿಕೊಂಡರು. ಸಾಮಾನ್ಯನೊಬ್ಬ ಒಂದು ರುಪಾಯಿ ಕದ್ದು ಸಿಕ್ಕಿಬಿದ್ದರು ಗಂಟೆಗಟ್ಟಲೆ ತೋರಿಸುವ ಕನ್ನಡ ಚಾನೆಲ್ ಗಳು ಯಾಕೆ ಸುಮ್ಮನಾದವು ಅನ್ನುವುದು ಗೊತ್ತಿಲ್ಲದ ಸಂಗತಿ ಅಲ್ಲ .  ನಾರಾಯಣ ಗೌಡರು ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆ ಅನ್ನುವುದು ಗುಟ್ಟಾದ ಸಂಗತಿ ಏನಲ್ಲ.



ತಮಿಳ್ ಚಿತ್ರ ಕನ್ನಡಕ್ಕೆ ರೀಮೇಕ್ ಮಾಡಿ , ಏನೋ ಮಾಡಿದೆ ಎಂದು ಬೀಗುವ ಪ್ರವೀಣ್ ಶೆಟ್ಟಿ, ಯುವಕರಿಗೆ ಕೆಲಸ ಕೊಡಿಸುತ್ತೇನೆ ಎಂದು ದುಡ್ಡು ತಿಂದು ಕೊನೆಗೆ ಅಥಣಿಯಲ್ಲಿ ಪೆಟ್ಟು ತಿಂದ ನವ ನಿರ್ಮಾಣ ಸೇನೆಯ ಭೀಮ ಶಂಕರ ಪಾಟಿಲ್, ಇವರ್ಯಾರು ಕನ್ನಡಕ್ಕಾಗಿ ಹೋರಾಟ ಮಾಡಲು ಬಂದವರಂತೆ ಕಾಣಿಸುತ್ತಿಲ್ಲ.. ಕನ್ನಡ ತಾಯಿ ಇವರೆಲ್ಲರ ಪಾಲಿಗೆ ಅನ್ನದಾತೆ ಆಗಿದ್ದಾಳೆ ಅಷ್ಟೇ . 

ನಿಜ ಹೇಳಬೇಕು ಅಂದರೆ ಇವರ್ಯಾರಿಗೂ ಕನ್ನಡದ ಬಗ್ಗೆ ಕನ್ನಡ ರಕ್ಷಣೆ ಬಗ್ಗೆ ಮಾತನಾಡುವ ಯೋಗ್ಯತೆ  ಇಲ್ಲ, ಕನ್ನಡ ಹೋರಾಟದ ಮುಖವಾಡ  ಹೊತ್ತು ತಮ್ಮ ಬೇಳೆ  ಬೇಯಿಸಿಕೊಳ್ಳಲು ಪ್ರಯತಿಸುತ್ತಿರುವ ಇಂಥವರ ಮದ್ಯೆ ನಲುಗುತ್ತಿರುವ ಕನ್ನಡ ತಾಯಿ ಮತ್ತು ಕನ್ನಡಿಗರು ಕರುಣೆಗೆ ಅರ್ಹರು ಅಷ್ಟೇ .
 ಇಷ್ಟೆಲ್ಲಾ ಸಮಸ್ಯೆಗಳ ಮದ್ಯೆ , ಎಡಗೈಗು , ಬಲಗೈಗು ವರ್ಣಾಶ್ರಮ ಕಲ್ಪಿಸಿ ಏನೋ ಕಂಡು ಹಿಡಿದೇ ಎಂದು ಬೀಗುವ ಬುದ್ದಿಜೀವಿಗಳು.... ತಾಯಿ ಕನ್ನಡಾಂಬೆ, 

ಕೊನೆಮಾತು : "ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" ಅನ್ನುವ ರಕ್ಷಣಾ ವೇದಿಕೆಯವರೇ ಕರ್ನಾಟಕದಲ್ಲಿ ನೂರಾರು ಸಾವಿರಾರು ವರ್ಷದಿಂದ ಬದುಕಿರುವ ತುಳುವರು , ಕೊಂಕಣಿಗರು , ಕೊಡವರು ನಿಮಗೆ ಯಾವ ತರಹ ಕಾಣಿಸುತ್ತಾರೆ ?. ಕನ್ನಡಿಗನಿಗೆ ಬೇಕಾಗಿರುವುದು ಸಾರ್ವಭೌಮತೆ ಅಲ್ಲ , ಸ್ವಾಭಿಮಾನದ ಬದುಕು ನೆನಪಿರಲಿ..
        

ಶುಕ್ರವಾರ, ಆಗಸ್ಟ್ 30, 2013

ಡುಂಡಿ - ಬಷೀರ್ ಸಂಪಾದಕೀಯಕ್ಕೆ ಒಂದು ಪ್ರತ್ಯುತ್ತರ

ಲೇಖಕರು - ಸತ್ಯನಾರಾಯಣ ರಾಮಚಂದ್ರನ್


ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ ಬರೆದ ಬಶೀರನಿಗೆ ಆತನ ಲೇಖನಕ್ಕೆ ಉತ್ತರವಾಗಿ :

ಕೊಲೆಗಾರ ಒಂದು ಜೀವಕ್ಕೆ ಹಾನಿ ಮಾಡಿದರೆ ಮನೋವಿಕಾರಿ ಲೇಖಕ ಒಂದು ಇಡೀ ಜನಾಂಗದ ನೋವಿಗೆ ಕಾರಣ ಆಗುತ್ತಾನೆ. ಅಷ್ಟೇ ಅಲ್ಲದೆ ಮನೋ ವಿಕಾರಿಗಳನ್ನು ರಸ್ತೆಯಲ್ಲೇ ಸ್ವೇಚ್ಚೆಯಿಂದ ಓಡಾಡಲು ಬಿಟ್ಟರೆ ಹುಚ್ಚು ಹಿಡಿದ ನಾಯಿಯಂತೆ ಅವರು ಯಾರನ್ನಾದರೂ ಕಚ್ಹ ಬಹುದು ಅಥವಾ ಜನಗಳೇ ಆ ಮನೋವಿಕಾರಿಯನ್ನು ಕಲ್ಲು ಹೊಡೆದು ಸಾಯಿಸ ಬಹುದು.
ಆದ್ದರಿಂದ ಅಂತಹವರನ್ನು ಆದಷ್ಟು ಬೇಗನೆ ಬಂದಿಸಿ ಅವರ ಪ್ರಾಣ ಹರಣ ತಡೆಯುವುದು ಪೋಲೀಸರ ಕೆಲಸ. ನೀವೇ ಹೇಳಿದಂತೆ ಇಂತಹ ಲೇಖಕರ ಹಿಂದಿರುವುದು ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಅಲ್ಲಾ. ಬದಲಾಗಿ ಬುದ್ದಿ ಜೀವಿಗಳು ಎಂಬ ನಿಮ್ಮಂತಹ ಮಾತೃ ದ್ರೊಹಿಗಳು ಸಮಾಜ ದ್ರೋಹಿಗಳು ಈ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ದೇಶ ದ್ರೊಹಿಗಳು. ನಿಮ್ಮಂತಹ ದ್ರೋಹಿಗಳ ಬೆಂಬಲ ಎಂದಿಗೂ ಸಹ ಸಮಾಜದ ಸ್ವಾಸ್ತ ಆರೋಗ್ಯಕ್ಕೆ ಮಾರಕ ಎಂದು ತಿಳಿದೇ ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ. 

"ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ" ಎಂದು ಅಪಾದಿಸುತ್ತಿರಿ. ಹುಚ್ಚು ನಾಯಿ ಎಷ್ಟು ಜನಕ್ಕೆ ಕಚ್ಚಿತು ಎಂದು ಲೆಕ್ಕ ಇಟ್ಟು ಅದನ್ನು ಹಿಡಿಯ ಬೆಕಿಲ್ಲ. ಅದಕ್ಕೆ ಹುಚ್ಚು ಹಿಡಿದಿದೆ ಎಂಬ ಒಂದೇ ಕಾರಣ ಸಾಕು. 

"ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು" - . ಎಂದು ಹೇಳುತ್ತಿದ್ದೇರಿ. ಸಾಹಿತ್ಯ ವಲದವರು ಮಾತ್ರ ಗದ್ದಲ ಎಬ್ಬಿಸ ಬಹುದೆಂದರೆ ಆ ಪುಷ್ಕ ಅವರಿಗೆ ಮಾತ್ರ ಮಿಸಲಾಗಿರಬೆಕು. ಅದಲ್ಲದೆ ಸಾರ್ವಜನಿಕ ಪ್ರಕಟಣೆ ಆದರೆ ಅದರ ಮೇಲೆ ಎಲ್ಲರಿಗು ಹಕ್ಕಿರುತ್ತದೆ. ಅದೇನು ನೀವು ನಿಮ್ಮ ಪಾಕಿಸ್ತಾನದಲ್ಲಿರುವ ಪ್ರಿಯತಮೆಗೆ ಬರೆದ ಪ್ರೇಮ ಪತ್ರ ಅಲ್ಲ. 
."ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ" ಎನ್ನುತ್ತಿರಿ ಮತ್ತೆ ಲೇಖಕನಿಗೆ ಸಾರ್ವತ್ರಿಕ ಶಾಪ ಏಕೆ ಎಂದೂ ಕೇಳುತ್ತೇರಿ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. 
"ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ". ಎನ್ನುವ ನೀವು ಅಸಂಖ್ಯಾತ ಹಿಂದೂಗಳ ನಂಬಿಕೆಗೆ ದ್ರೋಹ ಮಾಡುವುದು ಎಷ್ಟು ಸರಿ? 
"‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು" -  ಯಾವ ಅಧಾರಗಳು ?.ಗ಼ಣೆಶನ ಸಮ ಕಾಲೀನರು ದಾಖಲಿಸಿರುವ ಸತ್ಯವೇ??

" ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ" ಎಂದು ಬರೆದಿದ್ದೆರಿ. ಈಗ ಅದನ್ನೇ ನೀವು ಮಾಡಿ...ಪೊಲಿಸರ ವಿರುದ್ದ ಮೊಕದ್ದೊಮ್ಮೆ ಹಾಕಿ. 
" ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ" ಎನ್ನುತ್ತೇರಿ. ಸಾಂಕಾಮಿಕ ರೋಗ ಹರಡದಂತೆ ಎಚ್ಚರವಹಿಸಿದ್ದಾರೆ ಅಷ್ಟೇ 

"ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ". ಇದು ಯಾವುದಕ್ಕೆ ನಿಮ್ಮ ಮುನ್ನುಡಿ ಎಂಬುದು ನಿಮ್ಮ ಮುಂದಿನ ಸಾಲುಗಳಲ್ಲಿ ಗೊತ್ತಾಗುತ್ತದೆ. 
"ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದರು" ಎನ್ನುವ ನೀವು ಆಗ ಬೈರಪ್ಪನವರು ಇಸ್ಲಾಂ ಬಗ್ಗೆ ಬರೆದಿದ್ದರೆ ನೀವೇಕೆ ಸುಮ್ಮನಿದ್ದಿರಿ?? ಅವರ ವಿರುದ್ದ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲಾ .. ಏಕೆಂದರೆ  ಬೈರಪ್ಪನವರು ಬರೆದಿದ್ದು ಸತ್ಯ. ಅದಕ್ಕೆ ನೀವು ಸುಮ್ಮನಾದಿರಿ. "ಮೌನಂ ಸಮ್ಮತಿ ಸೂಚಕಂ"  ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನಸರಿಯಾದ ಕ್ರಮ ..

"ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ" ಎಂದು ನೀವೇ ಹೆಳುತ್ತೇರಿ. ಅದೇ ಕಾರಣಕ್ಕಾಗಿ ಬಂದಿಸಿದ್ದಾರೆ ಎಂದು ಗೊತ್ತಿಲ್ಲವೇ??
" ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಎಂದು ಹಪ ಹಪಿಸುತ್ತೇರಿ.." ನಿಜ ಅದು. ಆದರೆ ನಿಮ್ಮಂತಹ ಡೋಂಗಿ ಮತೀಯವಾದಿ ಲೇಖಕರಿಗೆ ಇದು ಅನ್ವಯಿಸುವುದಿಲ್ಲ.

"ಡುಂಡಿ" ಯೋಗೇಶ ಮಾಸ್ಟರ್ ಅನ್ನೋ "ಹುಚ್ಚು ಮನುಷ್ಯನ ಹತ್ತು ಮುಖಗಳು"

 ಇಂತಹ ಮನುಷ್ಯನಿಂದ ಇನ್ನೆಂತಹ  ಸಂಶೋದನೆ ನಿರೀಕ್ಷಿಸುವುದು ಸಾದ್ಯ ..?